HomePage_Banner_
HomePage_Banner_
HomePage_Banner_

ಮೊಬೈಲ್‌ನಲ್ಲಿ ಕೊರೊನಾ ಕೆಮ್ಮು! ಜಿಯೊ, ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಕೊರೊನಾ ಜಾಗೃತಿ

ಬೆಳ್ತಂಗಡಿ: ಕಳೆದ ಒಂದು ವಾರದಿಂದ ನಿಮ್ಮ ಕರೆ ಸ್ವೀಕರಿಸಿದ ಕೂಡಲೇ ಕೆಮ್ಮುವ ಸದ್ದು ಕೇಳಿಸುತ್ತದೆ. ಇದು ಕೊರೊನಾ ಜಾಗೃತಿ. ಮೊಬೈಲ್ ಕರೆಗಳಲ್ಲಿನ ಸ್ವಯಂಚಾಲಿತ ಕಾಲರ್ ಟ್ಯೂನ್ ಮೂಲಕ ಈ ಮಾರಕ ವೈರಸ್ ಹಬ್ಬದಂತೆ ಎಚ್ಚರ ಮೂಡಿಸಲಾಗುತ್ತಿದೆ.
ಜಿಯೊ, ಬಿಎಸ್‌ಎನ್‌ಎಲ್ ಸಿಮ್ ಬಳಸುತ್ತಿರುವ ಗ್ರಾಹಕರ ಮೊಬೈಲ್ ಸಂಖ್ಯೆಗಳಲ್ಲಿ ಮಾ.6 ಮಧ್ಯರಾತ್ರಿಯಿಂದಲೇ ಕೊರೊನಾ ಕಾಲರ್ ಟ್ಯೂನ್ ಆಕ್ಟೀವ್ ಆಗಿದೆ. ಪ್ರಸ್ತುತ ದೇಶದಲ್ಲಿ 80 ಕೋಟಿಗೂ ಹೆಚ್ಚು ಜನ ಮೊಬೈಲ್ ಬಳಸುತ್ತಿದ್ದಾರೆ. ಇವರಲ್ಲಿ ದೇಶದಾದ್ಯಂತ 36 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಮತ್ತು 11.69ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಬಿಎಸ್‌ಎನ್‌ಎಲ್ ಸಂಸ್ಥೆಗಳು ತನ್ನ ಗ್ರಾಹಕರ ದೂರವಾಣಿ ಸಂಖ್ಯೆಗಳಲ್ಲಿ ಕಾಲರ್ ಟ್ಯೂನ್ ಅಳವಡಿಸಿದೆ. ಆದರೆ, ಈಗಾಗಲೇ ಸಿನಿಮಾ ಸೇರಿದಂತೆ ವೈಯಕ್ತಿಕ ಕಾಲರ್ ಟ್ಯೂನ್‌ಗೆ ಸಬ್‌ಸ್ಕ್ರೈಬ್ ಮಾಡಿರುವ ಸಂಖ್ಯೆಗಳಿಗೆ ಜಾಗೃತಿ ಸಾಲುಗಳ ಕಾಲರ್ ಟ್ಯೂನ್ ಲಭ್ಯವಿಲ್ಲ. ಕೇವಲ ಕಾಲರ್‌ಟ್ಯೂನ್ ಹೊಂದದ ಶೇ.೪೦ ಗ್ರಾಹಕರ ಮೊಬೈಲ್ ನಂಬರ್‌ಗಳಲ್ಲಿ ಕೆಮ್ಮುವುದು ಕೇಳಿಸುತ್ತದೆ.
ಕೆಮ್ಮುವಾಗ ಕರವಸ್ತ್ರ ಬಳಕೆ, ಜ್ವರ, ಶೀತವಿರುವ ವ್ಯಕ್ತಿಗಳಿಂದ ಅಂತರ ಕಾಯ್ದು ಕೊಳ್ಳುವ ಬಗ್ಗೆ ಕಾಲರ್‌ಟ್ಯೂನ್‌ನಲ್ಲಿ ಸಂದೇಶ ರವಾನಿಸಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.