HomePage_Banner_
HomePage_Banner_
HomePage_Banner_

ಉಜಿರೆ ನೂತನ ಕಾರು ವಿಟಾರ ಬ್ರೆಝಾ ಮಾರುಕಟ್ಟೆಗೆ ಬಿಡುಗಡೆ

ಉಜಿರೆ : ಮಾರುತಿ ಸುಝೂಕಿ ಭಾರತ್ ಆಟೋ ಕಾರ್‍ಸ್ ಉಜಿರೆಯಲ್ಲಿ ನೂತನ ಕಾರು ವಿಟಾರ ಬ್ರೆಝಾವನ್ನು ಮಾ-6ರಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಮೊದಲ ಗ್ರಾಹಕರಾದ ಹಂಸಗಿರಿ ಸಂಸ್ಥೆಯ ವನಿತಾ ವಿ ನಾಯಕ್ ಪರವಾಗಿ ಸಂಸ್ಥೆಯ ಆಡಳಿತ ಪಾಲುದಾರದ ಬಾಲಕೃಷ್ಣ ಸಿ ನಾಯಕ್ ಕೀ ಹಸ್ತಾಂತರಿಸಿಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ ಉಜಿರೆ ಬ್ರಾಂಚ್‌ನ ಮ್ಯಾನೇಜರ್ ಕುಲ್‌ದೀಪ್ ಸಿಂಗ್, ಬ್ಯಾಂಕ್ ಆಫ್ ಬರೋಡಾ ಎಸ್.ಡಿ.ಎಂ ಕ್ಯಾಂಪಸ್‌ನ ಮ್ಯಾನೇಜರ್ ಪ್ರವೀಣ್, ರುಡ್‌ಸೆಡ್ ಸಂಸ್ಥೆಯ ಇ.ಒ ಜನಾರ್ಧನ್, ಅಳದಂಗಡಿ ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಸನ್ನಿ ಥೋಮಸ್, ನಿವೃತ್ತ ಸೈನಿಕ ಹರೀಶ್ ರೈ, ಉಜಿರೆ, ಪುತ್ತೂರು, ನೆಲ್ಯಾಡಿ ಬ್ರಾಂಚ್‌ನ ಎ.ಎಸ್.ಎಂ ಪ್ರದೀಪ್ ಕುಮಾರ್ ಶೆಟ್ಟಿ, ಸರ್ವಿಸ್ ಮ್ಯಾನೇಜರ್ ಜನಾರ್ಧನ್, ಜಗದೀಶ್ ಬಳಂಜ, ಯಶವಂತ್, ಶ್ರೀಮಂದರ ಜೈನ್ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು. ಟೀಮ್ ಲೀಡರ್ ಮಹಮ್ಮದ್ ಆಸೀಫ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದರು.

ಹೊಸ ವಿಟಾರ ಬ್ರೆಝಾ ವೈಶಿಷ್ಟ್ಯಗಳು
ಹೊಸ ವಿಟಾರ ಬ್ರೆಝಾ ಬಿಎಸ್ 6 ಪೆಟ್ರೋಲ್ 6 ವಿವಿಧ ಬಣ್ಣಗಳಲ್ಲಿ ಮಾತ್ರವಲ್ಲದೆ 3 ವಿಶಿಷ್ಟವಾದ ಡ್ಯೂಲ್ ಟೋನ್ ಬಣ್ಣಗಳಲ್ಲೂ ಲಭ್ಯವಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 7.34 ಲಕ್ಷ ರೂಗಳಿಂದ ಪ್ರಾರಂಭವಾಗುತ್ತದೆ. ಈ ನೂತನ ವಿಟಾರ ಬ್ರೆಝಾ ಬೋಲ್ಡ್ ಫ್ರಂಟ್ ಗ್ರಿಲ್ ಪ್ರೊಜೆಕ್ಟರ್ ಆಟೋಮೈಲ್ ಹೆಡ್ ಲ್ಯಾಂಪ್, ಡ್ಯುಯಲ್ ಫಂಕ್ಷನ್ ಎಲ್‌ಇಡಿ ಡಿಆರ್‌ಎಲ್‌ಎಸ್, ಎಲ್ ಇಡಿ ಫಾಗ್ ಲ್ಯಾಂಪ್ಸ್, ಎಲ್‌ಇಡಿ ಟೈಲ್ ಲ್ಯಾಂಪ್ಸ್, ಪ್ರಿಸಿಸನ್ ಕಟ್ 16 ಇಂಚು ಅಲ್ಲೋಯ್ಸ್ ವೀಲ್, ಲೆದರ್ ರ್ರಾಪ್ಡ್ ಸ್ಟಿಯರಿಂಗ್, ಸೀಟ್, 17.78 ಸೆಂ.ಮೀ ಸ್ಮಾರ್ಟ್ ಪ್ಲೇ ಸ್ಟಿಡಿಯೋ, ಸ್ಪೋರ್ಟಿ ಬ್ಕ್ಯಾಕ್ ಇಂಟಿರಿಯರ್, ಆಟೋ ಡಿಮ್ಮಿಂಗ್ ಆರ್‌ಯುಎನ್‌ಐ, ಆಟೋ ಫಲ್ಡಿಂಗ್ ಮಿರರ್ ಇತ್ಯಾದಿ ಅನೇಕ ವೈಶಿಷ್ಟ್ಯವನ್ನು ಹೊಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.