ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವೈಭವದ ದಿಬ್ಬಣ ಮೆರವಣಿಗೆ, ಸಾಮೂಹಿಕ ವಿವಾಹ

ಪುಂಜಾಲಕಟ್ಟೆ : ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 36 ನೇ ಸಂಭ್ರಮಾಚರಣೆಯ ಪ್ರಯುಕ್ತ 12 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಬಂಗ್ಲೆ ಮೈದಾನದಲ್ಲಿ ಮಾ.8 ರಂದು ಜರುಗಿತು.

ಬೆಳಗ್ಗೆ ಪುಂಜಾಲಕಟ್ಟೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪುಂಜಾಲಕಟ್ಟೆ ಪೋಲಿಸ್ ಠಾಣಾಧಿಕಾರಿ ಸೌಮ್ಯ ಜೆ ಅವರು ದಿಬ್ಬಣ ಮೆರಮಣಿಗೆಯನ್ನು ಉದ್ಘಾಟಿಸಿದರು.

ಪ್ರಮುಖರಾದ ಅಭಯಂತರ ಕೃಷ್ಣ ಜೆ, ತಾ.ಪಂ ಸದಸ್ಯರಾದ ರಮೇಶ್ ಕುಡ್ಮೇರ್, ಪ್ರಭಾಕರ ಪ್ರಭು, ವಾಮದಪದವು ಸೇ.ಸ. ಸಂಘದ ಅಧ್ಯಕ್ಷ ಕಮಾಲ್ ಶೆಟ್ಟಿ ಉದ್ಯಮಿಗಳಾದ ಹಂಝ ಬಸ್ತಿಕೋಡಿ, ಧರ್ಮೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


ಬಳಿಕ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರಮಣಿಗೆ ರಾಜ್ಯದ ಪ್ರಸಿದ್ಧ ಕಲಾತಂಡಗಳೊಂದಿಗೆ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ವಿವಿಧ ವಾಹನಗಳೊಂದಿಗೆ ಬ್ಯಾಂಡ್‌ವಾದನ, ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವ ಪೂರ್ಣವಾಗಿ ಬಂಗ್ಲೆ ಮೈದಾನಕ್ಕೆ ಸಾಗಿ ಬಂತು ಸಭಾಂಗಣದಲ್ಲಿ ವಧುವರರನ್ನು ಸಾಂಪ್ರದಾಯಿಕವಾಗಿ ಎದುರುಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ , ಜಿ.ಪಂ.ಸದಸ್ಯ ಯಂ. ತುಂಗಪ್ಪ ಬಂಗೇರ, ಅಧ್ಯಕ್ಷ ಪ್ರಶಾಂತ್ ಪುಂಜಾಲ್ ಕಟ್ಟೆ, ಕ್ಲಬ್‌ನ ಸಂಚಾಲಕ ರಾಜೇಶ್ ಪಿ. ಪುಂಜಾಲಕಟ್ಟೆ, ಗೌರವಧ್ಯಕ್ಷ ಅಬ್ದುಲ್ಲಾ ಪಿ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ರಂಜಿತ್ ಹೆಚ್.ಡಿ ಹಾಗೂ ಕ್ಲಬ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.