HomePage_Banner_
HomePage_Banner_
HomePage_Banner_

ಮಾಯಾ ಮಹಾದೇವ ದೇವಸ್ಥಾನ ಜಾತ್ರಾಮಹೋತ್ಸವಕ್ಕೆ ಅದ್ಧೂರಿ ತೆರೆ

ಬೆಳಾಲು : ಇಲ್ಲಿನ ಶ್ರೀಮಾಯಾ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.6ರಿಂದ ಮಾ.10ರವರೆಗೆ ಆಲಂಬಾಡಿ ವೇ.ಮೂ.ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.


ಮಾ.6ರಂದು ಬೆಳಿಗ್ಗೆ ಗಣಹೋಮ, ಮಾಯಾಗುತ್ತಿನ ಮನೆಯಲ್ಲಿ ಶಾರಿಹಾಕಿ ಗೊನೆಕಡಿದು ಗ್ರಾಮಸ್ಥರು ಹೊರಕಾಣಿಕೆ ಸಮರ್ಪಿಸಿದರು. ಸಂಜೆ ತಂತ್ರಿವರ್ಯರಿಗೆ ಸ್ವಾಗತಿಸಿ ಧ್ವಜಾರೋಹಣ ಮೂಲಕ ಜಾತ್ರೆಗೆ ಚಾಲನೆ ನೀಡಿ ಪ್ರತಿದಿನ ಗಣಹೋಮ, ಮಾ.7ರಂದು ಸಾಮೂಹಿಕ ಶ್ರೀಶನೈಶ್ಚರ ಪೂಜೆ, ದುರ್ಗಾಪೂಜೆ, ಉತ್ಸವ, ಮಾ.8ರಂದು ರಾತ್ರಿ ಚಂದ್ರಮಂಡಲ ಉತ್ಸವ ಮತ್ತು ವಸಂತ ಕಟ್ಟೆ ಉತ್ಸವ. ಮಾ.9ರಂದು ದರ್ಶನ ಬಲಿ, ಮಹಾಪೂಜೆ ರಾತ್ರಿ ಮಾಯಾಗುತ್ತು ಮನೆಯಿಂದ ಕೊಡಮಣಿತ್ತಾಯ, ಪರಿವಾರ ದೈವಗಳ ಭಂಡಾರ ಆಗಮನ ಹಾಗೂ ಶ್ರೀದೇವರ ರಥೋತ್ಸವ ಜರುಗಿತು. ಮಾ.10ರಂದು ಅವಭೃತ, ಧ್ವಜಾವರೋಹಣ, ರಂಗಪೂಜೆ ಬಳಿಕ ದೈವಗಳಿಗೆ ನೇಮೋತ್ಸವ ನಡೆಯಿತು. ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.


ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಪದ್ಮಗೌಡ, ಅನುವಂಶಿಕ ಮೊಕ್ತೇಸರ ಪುಷ್ಪದಂತ್ ಜೈನ್, ಅಸ್ರಣ್ಣರಾದ ಗಣೇಶ್ ಬಾರಿತ್ತಾಯ, ಅರ್ಚಕ ಕೇಶವ ರಾಮಾಯಾಜಿ, ಶಿವಕುಮಾರ್ ಬಾರಿತ್ತಾಯ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿನೂರು, ದಾಮೋದರ ಗೌಡ, ರುಕ್ಮಯ್ಯ ಗೌಡ ಪರಾರಿ, ಶ್ರೀಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಸಂತ ಮತ್ತು ಸದಸ್ಯರುಗಳು, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಗೌಡ ಮಾಯಾ ಮತ್ತು ಪದಾಧಿಕಾರಿಗಳು ಸದಸ್ಯರು, ವರಮಹಾಲಕ್ಷ್ಮೀಪೂಜಾ ಸಮಿತಿ ಅಧ್ಯಕ್ಷೆ ಭಾರತಿ  ಮತ್ತು ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಮುಂತಾದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.