HomePage_Banner_
HomePage_Banner_

ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನ ಜಾತ್ರಾ ಮಹೋತ್ಸವ ನೂತನ ವಸಂತ ಮಂಟಪ ಸಮರ್ಪಣೆ.

ಬೆಳ್ತಂಗಡಿ; ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ದ ಜಾತ್ರಾ ಮಹೋತ್ಸವ ಮತ್ತು ನೂತನ ವಸಂತ ಮಂಟಪದ ಸಮರ್ಪಣೆ ಮಾ.‌ 25 ರಂದು ನಡೆಯಲಿದೆ. ಅಂದು ದೇವಸ್ಥಾನದ ಸನ್ನಿದಾನದಲ್ಲಿ ಭಜನಾ ಸತ್ಸಂಗ ಜರುಗಲಿದೆ. ಜೊತೆಗೆ ಅಂತರ್ಜಿಲ್ಲಾ‌ಮಟ್ಟದ ಕುಣಿತ ಭಜನೆ ಸ್ಪರ್ದೆ ಆಯೋಜಿಸಲಾಗಿದೆ. ಇದರ ಜೊತೆಗೆ ಮಾ.‌ 31 ರ ವರೆಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅಶ್ವಥ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಭಜನಾ ಸ್ಪರ್ಧೆಯಲ್ಲಿ ವಿಜೇತರಾಗುವ ತಂಡಕ್ಕೆ ಬಹುಮಾನ, ಭಾಗವಹಿಸುವ ಎಲ್ಲ ತಂಡಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.
ಎಂದರು.‌
ಪತ್ರಿಕಾಗೋಷ್ಠಿಯಲ್ಲಿ ದೇವಳಸ ಆನುವಂಶಿಕ ಆಡಳಿತ ಮೊಕ್ತೇಸರ ಬಿ ಶೀತಲ್ ಪಡಿವಾಳ್, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಸತೀಶ್ ದೇವಾಡಿಗ ಬಳಂಜ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರ್ದಡ್ಕ, ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಾ.‌25 ರಂದು ಶಿವಧೂತ ಗುಳಿಗ ವಿನೂತನ ಶೈಲಿಯ ನಾಟಕ‌ ಪ್ರದರ್ಶನ, ಮಾ.‌29 ರಂದು ಡ್ಯಾನ್ಸ್‌ಇಂಡಿಯಾ ಡ್ಯಾನ್ಸ್ ತಂಡದಿಂದ ಹೆಜ್ಜೆನಾದ ಸಾಂಸ್ಕೃತಿಕ ವೈವಿದ್ಯ ನಡೆಯಲಿದ್ದು, ಚಲನಚಿತ್ರ ನಟರಾದ  ದಿಗಂತ್ , ಐಂದ್ರಿತಾ ರೈ ಭಾಗಿಯಾಗಲಿದ್ದಾರೆ. ಮಾಲ್ಗುಡಿ ಡೇಸ್ ಚಲನ ಚಿತ್ರ ದ ಕಿಶೋರ್ ಮೂಡಬಿದ್ರೆ ಮತ್ತು ಅವರ ಕಲಾವಿದರ ತಂಡ ಭಾಗಿಯಾಗಲಿದ್ದಾರೆ.
ಮಾ.‌31 ರಂದು ಕೇರಳದ ವಿಶ್ವವಿಖ್ಯಾತ ಕಲಾವಿದೆ ವೈಷ್ಣವಿ ಕೆ ಸುನಿಲ್ ಅವರ ನಾಟ್ಯತಂಡದಿಂದ ರಾಧಾ‌ಮಾಧವ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.