ತಾ.ಪಂ ಕಾರ್ಯನಿರ್ವಣಾಧಿಕಾರಿ ಲಾಯಿಲ ಗ್ರಾ.ಪಂಕ್ಕೆ ಭೇಟಿ; ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಗಮನ ಹರಿಸಲು ಸೂಚನೆ

ಲಾಯಿಲ: ಪ.ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿನ ಬಗ್ಗೆ ಡಿಎಸ್‌ಎಸ್ ತಾಲೂಕು ಸಂಘಟನಾ ಸಂಚಾಲಕ ನಾಗರಾಜ ಎಸ್. ಲಾಯಿಲ ನೀಡಿದ ದೂರಿನ ಹಿನ್ನಲೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ಇತ್ತಿಚೇಗೆ ಸ್ಥಳಕ್ಕೆ ಭೇಟಿ ನೀಡಿದರು.
ಪುತ್ರಬೈಲು ಪ.ಜಾತಿ ಕಾಲೋನಿಗೆ ಜಿ.ಪಂ ವತಿಯಿಂದ 2012ನೇ ಸಾಲಿನಲ್ಲಿ ನಿರ್ಮಿಸಲಾದ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಶುಚಿತ್ವವನ್ನು ಮಾಡದೆ, ದುರಸ್ತಿಯ ಬಗ್ಗೆ ಮನವಿ ನೀಡಿದರೂ, ಆಡಳಿತ ವರ್ಗ ಸ್ಪಂದಿಸಿಲ್ಲ ಎಂದು ನಾಗರಾಜ್ ದೂರು ನೀಡಿದ್ದರು. ಸಾರ್ವಜನಿಕ ಬಾವಿಯನ್ನು ಪರಿಶೀಲನೆ ಮಾಡಿದ ಅಧಿಕಾರಿಯವರು ಕೂಡಲೇ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಗಮನ ಹರಿಸುವಂತೆ ಪಿಡಿಒಗೆ ಸೂಚಿಸಿದರು.


ಅಂಬೇಡ್ಕರ್ ನಗರ ಪುತ್ರಬೈಲುನಲ್ಲಿ ಮುರಿದು ಹೋದ ಕಾಲು ಸಂಕ ಪರಿಶೀಲಿಸಿ ಇಲ್ಲಿ ಕೆರೆಯ ಸಮೀಪದಲ್ಲಿ ಅಂಗನವಾಡಿ, ಶಾಲಾ ಮಕ್ಕಳು ಹಾದು ಹೋಗುವ ಪರಿಸ್ಥಿತಿಯನ್ನು ಮನಗಂಡು ಇದರ ಬಗ್ಗೆ ಕ್ರಮಕ್ಕೆ ನಿರ್ದೇಶನ ನೀಡಿದರು.
ಕುಂಠಿನಿ ಎಂಬಲ್ಲಿ ಹಲವಾರು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಕೋಳಿ ಮಾಂಸ ಮಾರಾಟದ ಅಂಗಡಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಸಾರ್ವಜನಿಕ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಅನಧಿಕೃತವಾಗಿ ನೀರಿನ್ನು ಬಳಸುತ್ತಿರುವ ಕುರಿತು ಗ್ರಾ. ಪಂ, ಅಧ್ಯಕ್ಷೆ ವೀಣಾ ರಾವ್ ಮಾಹಿತಿ ನೀಡಿದರು. ಕಕ್ಕೇನಾ ಅಂಬೇಡ್ಕರ್ ನಗರಕ್ಕೆ ಹೋಗುವ ರಸ್ತೆಗೆ ಗುತ್ತಿಗೆದಾರರ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಮೋರಿಯ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಿಕೊಡುವಂತೆ ನಾಗರಾಜ್ ಒತ್ತಾಯಿಸಿದರು.
ಕಕ್ಕೇನಾ ಶಿವಾಜಿ ನಗರ ಎಂಬಲ್ಲಿ ದಲಿತ ಕುಟುಂಬ ಒಂದು ಮಾವಿನ ಮರದ ಬುಡದಲ್ಲಿ ಜೊಪಡಿ ಗೂಡಿನಲ್ಲಿ ಅಶ್ರಯ ಪಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ನಿರಾಶ್ರಿತರ ಕುಟುಂಬಕ್ಕೆ ಆಶ್ರಯ ನಿವೇಶನದ ಅಡಿಯಲ್ಲಿ ಮನೆ ಮಂಜೂರಾತಿಯ ಕ್ರಮವಹಿಸುವುದಾಗಿ ಭರವಸೆಯನ್ನು ನೀಡಿದರು. ಲಾಯಿಲ ಗ್ರಾ. ಪಂ.ಕ್ಕೆ ಭೇಟಿ ನೀಡಿ ದಿನದಿಂದ ದಿನಕ್ಕೆ ಬ್ಯಾಂಕ್ ವ್ಯವಹಾರ ಜಮೆಯನ್ನು ಮಾಡುವಂತೆ ಪಿಡಿಒಗೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.