ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಎರಡನೇ ದಿನದ ವಿಶೇಷವೇನು?

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

*ಭಕ್ತರಿಗೆ ಎಳನೀರು ಪಾನೀಯ ವ್ಯವಸ್ಥೆ ಹಾಗೂ ಅನ್ನಸಂತರ್ಪಣೆ

ತಣ್ಣೀರುಪಂತ: ಇಲ್ಲಿನ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ ಪ್ರತಿಷ್ಠಾಷ್ಟಬಂಧ ಬಹ್ಮಕಲಶೋತ್ಸವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವದ ಎರಡನೇ ದಿನವಾದ ಮಾ.೯ರಂದು ಬೆಳಿಗ್ಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ಪ್ರೋಕ್ತ ಹೋಮ, ಬಿಂಬಶುದ್ಧಿ, ಕಲಶಾಭಿಷೇಕ, ಶ್ರೀರುದ್ರಪಾರಾಯಣ, ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
ಬೆಳಿಗ್ಗೆ ಗಾಯತ್ರಿ ಮಹಿಳಾ ಭಜನಾ ಮಂಡಳಿ ಕಿನ್ನಿಕಂಬಳ, ಗುರುಪುರ ಕೈಕಂಬ ಅವರಿಂದ ಭಜನೆ ಸೇವೆ ನೀಡಿದರು.


ಭಕ್ತರಿಗೆ ಎಳನೀರು ಪಾನೀಯ: ದೇವಸ್ಥಾನಕ್ಕೆ ಬಂದ ಭಕ್ತಾಧಿಗಳಿಗೆ ಸುಮಾರು 250ಕ್ಕೂ ಹೆಚ್ಚು ಎಳನೀರುಗಳನ್ನು ಬಳಸಿ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಪಲ್ಲಪೂಜೆ : ಸಾರ್ವಜನಿಕ ಅನ್ನಸಂತರ್ಪಣೆ ಮೊದಲು ದೇವಳದ ಅರ್ಚಕರಿಂದ ಪಲ್ಲದ (ಅನ್ನದ ರಾಶಿ) ಪೂಜೆ ಮಾಡಿದ ಬಳಿಕ ಅನ್ನದಾನಿಗಳಿಗೆ, ಅಡುಗೆ ಬಾಣಸಿಗರಿಗೆ ದೇವರ ಪ್ರಸಾದ ವಿತರಿಸಲಾಯಿತು. ಸಾರ್ವಜನಿಕ ಅನ್ನಸಂತರ್ಪಣೆ ಯಲ್ಲಿ ಭಕ್ತರಿಗೆ ಅನ್ನ, ಸಾರು, ಸಾಂಬಾರು, ಪಲ್ಯ, ಪಾಯಸ, ಮಜ್ಜಿಗೆ ವಿತರಿಸಲಾಯಿತು.

ಸಂಜೆ ನೂತನ ಬಿಂಬ ಪರಿಗ್ರಹ, ಜಲಾಧಿವಾಸ, ತ್ರಿಕಾಲ ಪೂಜೆ, ಅಂಕುರ ಪೂಜೆ, ರಾತ್ರಿಯ ಪೂಜೆ ಹಾಗೂ ಕುತ್ತಿನದ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯಿಂದ ಭಜನಾ ಸೇವೆ, ಧಾರ್ಮಿಕ ಸಭೆ ನಡೆಯಲಿದೆ.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಮಾಧವ ಜೋಗಿತ್ತಾಯ, ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಮಡಪ್ಪಾಡಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್ ಎಕ್ಕಳ, ಕೋಶಾಧಿಕಾರಿ ಚಂದ್ರಹಾಸ ಪಕಳ, ಪ್ರಧಾನ ಕಾರ್ಯದರ್ಶಿಗಳಾದ ದುಗ್ಗಪ್ಪ ಗೌಡ ಪೊಸಂದೋಡಿ, ಪೂವಪ್ಪ ಬಂಗೇರ ಅಳಕೆ, ಕೋಶಾಧಿಕಾರಿ ಸುರೇಶ್ ಜಿ ಕರ್ಪಾಡಿ, ಪ್ರಧಾನ ಅರ್ಚಕರಾದ ಅಶೋಕ್ ಭಟ್ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಪ್ರಭಾಕರ ಗೌಡ ಪೊಸಂದೋಡಿ, ಸಂಚಾಲಕರುಗಳಾದ ಬಾಲಕೃಷ್ಣ ಪಕಳ, ವಜ್ರಕುಮಾರ್ ಜೈನ್, ಪ್ರತಿಮಾ ಶೆಟ್ಟಿಗಾರ್, ಸಂಧ್ಯಾ ದೇಸಿನ್ ಕೋಡಿ, ಸ್ವಾತಿ ಸುರಕ್ಷಿತ್, ಸೀತಾರಾಮ ರೈ, ಶೋಭಾ ಜನಾರ್ದನ ನಂಜ, ಉದಯ ನಾಯ್ಕ, ಪುರುಷೋತ್ತಮ ಶೆಟ್ಟಿ, ತೀರ್ಥಕುಮಾರ್, ಹರೀಶ್ ಅಳಕ್ಕೆ, ರಕ್ಷಿತ್ ಮಡ್ಯೊಟ್ಟು, ಅಕ್ಷತಾ ರೈ ನಂಜ, ವಿಶ್ವನಾಥ್ ಮೂಲ್ಯ, ಪುರುಷೋತ್ತಮ ಕೋಡಿಯಡ್ಕ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಕುಮಾರ್ ಅಳಕೆ, ಹೊರೆಕಾಣಿಕೆ ಪ್ರಧಾನ ಸಂಚಾಲಕ ಕಮಲಾಕ್ಷ ಗೌಡ, ಪ್ರಚಾರ ಮತ್ತು ಅಲಂಕಾರ ಸಮಿತಿ ಪ್ರಧಾನ ಸಂಚಾಲಕ ಮಿಥುನ್ ಕುಲಾಲ್, ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ಶಾಶ್ವತ್ ಜೈನ್ ಅಂತರ, ವೈದಿಕ ಸಮಿತಿ ಪ್ರಧಾನ ಸಂಚಾಲಕ ವೆಂಕಟೇಶ್ವರ ಭಟ್ ಸಿ.ಎಚ್.ಎಕ್ಕಳ, ಅತಿಥಿ ಸತ್ಕಾರ ಪ್ರಧಾನ ಸಂಚಾಲಕ ಸುರೇಶ್ ಗೌಡ ಕರ್ಪಾಡಿ, ಸೇವಾ ಕಚೇರಿ ಪ್ರಧಾನ ಸಂಚಾಲಕ ದೇಜಪ್ಪ ಪೂಜಾರಿ, ಅನ್ನಸಂತರ್ಪಣಾ ಸಮಿತಿ ಪ್ರಧಾನ ಸಂಚಾಲಕ ಅಶೋಕ್ ದೇಸಿನ್ ಕೋಡಿ, ಚಪ್ಪರ ಸಮಿತಿ ಪ್ರಧಾನ ಸಂಚಾಲಕ ದಿನೇಶ್ ಪೊಸಂದೋಡಿ, ಭಜನಾ ಸಮಿತಿ ಪ್ರಧಾನ ಸಂಚಾಲಕ ತೀರ್ಥಕುಮಾರ್, ಆಹಾರ ಸಮಿತಿ ಪ್ರಧಾನ ಸಂಚಾಲಕ ನವೀನ್ ಚಂದ್ರ ಅಂತರ, ಪಾನೀಯ ಸಮಿತಿ ಪ್ರಧಾನ ಸಂಚಾಲಕಿ ಕಸ್ತೂರಿ ಡಿ.ಶೆಟ್ಟಿ, ಸ್ವಚ್ಛತಾ ಸಮಿತಿ ಪ್ರಧಾನ ಸಂಚಾಲಕಿ ಜಯಂತಿ ಪಾಲೇದು, ಆಡಳಿತ ಮಂಡಳಿಯ ಪೂವಪ್ಪ ಬಂಗೇರ, ರಂಗಪ್ಪ ಪೂಜಾರಿ, ಶ್ರೀಧರ ಪೂಜಾರಿ, ಕಮಲಾಕ್ಷ ಗೌಡ, ವಿಷ್ಣುಭಟ್, ವಜ್ರಕುಮಾರ್ ಅಂತರ, ರೋಹಿಣಿ ಚಂದ್ರಹಾಸ ಪಕಳ, ಸುಜಾತ ಕುಂಞಪ್ಪ ಮೂಲ್ಯ, ಸಪ್ನಾ ಶೆಟ್ಟಿ, ಶಕುಂತಲಾ ಭವಾನಿ, ಸ್ನೇಹಾ ಭಟ್ ಅಳಕೆ ಮುಂತಾದವರು ಇದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.