ಬಂಗಾಡಿ ಕೊಲ್ಲಿ ಜೋಡುಕರೆ ಕಂಬಳ: ವರ್ಷದಲ್ಲಿ 46 ಪದಕ ಗೆದ್ದ ಶ್ರೀನಿವಾಸ ಗೌಡ ಮೂಡಬಿದ್ರೆ

ಮಿತ್ತಬಾಗಿಲು: ಇಲ್ಲಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ಇತಿಹಾಸ ಪ್ರಸಿದ್ಧ ಬಂಗಾಡಿ ಕೊಲ್ಲಿ ಸೂರ್ಯ-ಚಂದ್ರ ಜೋಡಕರೆ ಕಂಬಳ ಮಾ. 8 ರಂದು ಸಮಾಪ್ತಿಗೊಂಡಿದ್ದು, 150 ಜೋಡಿಗಳು ಭಾಗವಹಿಸಿದ್ದ ಈ ಕಂಬಳದಲ್ಲಿ ಮೂಡಬಿದ್ರೆ ಅಶ್ವಥಪುರದ ಶ್ರೀನಿವಾಸ ಗೌಡ ಕಂಬಳ ಕ್ಷೇತ್ರದ ಇತಿಹಾಸದಲ್ಲೇ ವರ್ಷದಲ್ಲಿ 46 ಪದಕ ಪಡೆದ ಏಕಮಾತ್ರ ಓಟಗಾರರಾಗಿ ಮಿಂಚಿದ್ದಾರೆ. ಈ ಹಿಂದೆ 35 ಪದಕಗಳ ಮೂಲಕ ದಾಖಲೆ ಬರೆದ ಸುರೇಶ್ ಶೆಟ್ಟಿ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ.


ಫಲಿತಾಂಶ:
ಕನೆಹಲಗೆ ವಿಭಾಗ:
ಪ್ರಥಮ: ಬಾರಕೂರು ಶಾಂತಾರಾಮ ಶೆಟ್ಟಿ (ಓಡಿಸಿದವರು-ಮಂದಾರ್ತಿ ಶಿರೂರು ಗೋಪಾಲ ನಾಯ್ಕ, ದ್ವಿತೀಯ: ಬೋಳದಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ ಭಟ್ (ಓಡಿಸಿದವರು-ಬೈಂದೂರು ಭಾಸ್ಕರ ದೇವಾಡಿಗ), ಹಗ್ಗಹಿರಿಯ ವಿಭಾಗ: ಪ್ರಥಮ ಮತ್ತು ದ್ವಿತೀಯ ಅವಳಿ ಬಹುಮಾನ: ಕೊಳಚ್ಚೂರು ಕುಂಡೆಟ್ಟು ಸುಕುಮಾರ್ ಶೆಟ್ಟಿ ಎ ಮತ್ತು ಬಿ., ಅಡ್ಡಹಲಗೆ ವಿಭಾಗ: ಪ್ರಥಮ: ಮಿಜಾರು ಪ್ರಸಾದ ನಿಲಯ ಶಕ್ತಿಪ್ರಸಾದ್ ಶೆಟ್ಟಿ (ಓಡಿಸಿದವರು-ಮೂಡಬಿದ್ರೆ ಅಶ್ವಥಪುರ ಶ್ರೀನಿವಾಸ ಗೌಡ), ದ್ವಿತೀಯ: ಮೂರ್ಲಾ ಗಿರೀಶ್ ಆಳ್ವ (ಓಡಿಸಿದವರು-ಹಿರೇಬೆಟ್ಟು ಆಕಾಶ್, ನೇಗಿಲು ಹಿರಿಯ ವಿಭಾಗ: ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ ಎ.(ಓಡಿಸಿದವರು-ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ ಶೆಟ್ಟಿ, ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ (ಓಡಿಸಿದವರು-ಪೆರಿಂಜೆ ಪ್ರಮೋದ್ ಕುಮಾರ್),

ನೇಗಿಲು ಕಿರಿಯ ವಿಭಾಗ: ಪ್ರಥಮ: ಮೂಡಬಿದ್ರೆ ನ್ಯೂ ಪಡಿವಾಳ್ ಸ್ತುತಿ ಹಾರ್ದಿಕ್ ಪಡಿವಾಳ, (ಓಡಿಸಿದವರು-ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ,ದ್ವಿತೀಯ: ಕಾರಿಂಜ ಕುಂಬೇಲುಗುತ್ತು ಪ್ರಶಾಂತ್ ಪೂಜಾರಿ (ಓಡಿಸಿದವರು-ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ), ನೇಗಿಲು ಹಿರಿಯ ವಿಭಾಗ: ಮಾರೂರು ಬಿರ್ನೊಟ್ಟು ಅಶ್ವಿತ್ ಶೆಟ್ಟಿ (ಓಡಿಸಿದವರು-ಮರೋಡಿ ಶ್ರೀಧರ್), ದ್ವಿತೀಯ: ನಲ್ಲೂರು ಗಂಡ್ಯೋಟ್ಟು ಸೌಮ್ಯಾ ಸಮೃದ್ಧ್ ಕುಮಾರ್ ಬಿ(ಓಡಿಸಿದವರು-ಅಳದಂಗಡಿ ಗಿರೀಶ್ ಕುಮಾರ್).

ಸುದ್ದಿ ಯೂ-ಟ್ಯೂಬ್ ಚಾನೆಲ್ ನಲ್ಲಿ ಕಂಬಳದ  ನೇರಪ್ರಸಾರ ಮಾಡಲಾಗಿತ್ತು. 75,000ಕ್ಕೂ ಮಿಕ್ಕಿ ಕಂಬಳಾಭಿಮಾನಿಗಳು ನೇರ ಪ್ರಸಾರ ವೀಕ್ಷಿಸಿದ್ದಾರೆ.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.