ಕುವೆಟ್ಟು ತಾ.ಪಂ ಹಾಗೂ ಕುವೆಟ್ಟು ಗ್ರಾ.ಪಂ ಅನುದಾನದಲ್ಲಿ ನಿರ್ಮಾಣಗೊಂಡ ಶೌಚಾಲಯದ ಶಾಲೆಗೆ ಹಸ್ತಾಂತರ

ಕುವೆಟ್ಟು: ದ.ಕ.ಜಿ.ಪಂ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕುವೆಟ್ಟು ತಾಲೂಕು ಪಂಚಾಯತ್ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಶೌಚಾಲಯದ ಶಾಲೆಗೆ ಹಸ್ತಾಂತರ ಕಾರ್ಯಕ್ರಮ ಮಾ 9 ರಂದು ಜರಗಿತು.
ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ. ಶೌಚಾಲಯ ಹಸ್ತಾಂತರ ಮಾಡಿದರು. ತಾ ಪಂ ಸದಸ್ಯ ಗೋಪಿನಾಥ್ ನಾಯಕ್ ನಾಮಫಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ.ಪಂ ಉಪಾಧ್ಯಕ್ಷೆ ಅಕ್ಷತಾ ಕೆ ಶೆಟ್ಟಿ., ಸದಸ್ಯರಾದ ಮಾಲತಿ, ತುಂಗಮ್ಮ, ಗುರುವಾಯನಕೆರೆ ಕ್ಲಸ್ಟರ್ ಸಿ ಆರ್ ಪಿ ರಾಜೇಶ್, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಹಿರಿಯ ಪ್ರಭಂದಕರಾದ ಗೋವಿಂದ ಭಟ್ ಆಗಮಿಸಿದ್ದರು.ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅರ್ಕಜೆ, ಉಪಾಧ್ಯಕ್ಷೆ ಜಾನಕಿ, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಬಿ ಶೆಟ್ಟಿ ಪೆರಂಗೊಡಿ, ಶಾಲಾ ಮಹಾಪೋಷಕರು ನಿವೃತ ಎಸ್.ಡಿ.ಸಿ.ಸಿ ಬ್ಯಾಂಕ್ ಮೆನಜರ್ ಕೃಷ್ಣ ರೈ, ರಾಜುದ್ದೀನ್ ಸಬರಬೈಲು, ದಾಮೋದರ್ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರು ಕರುಣಾಕರ ಜೆ ಉಚ್ಚಿಲ ಉಪಸ್ಥಿತರಿದ್ದರು.
ಶಿಕ್ಷಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಕರುಣಾಕರ ಜೆ ಉಚ್ಚಿಲ ಪ್ರಾಸ್ತಾವಿಕ ಮಾತಿನೊಂದದಿಗೆ ಸ್ವಾಗತಿಸಿದರು. ಸಹ ಶಿಕ್ಷಕಿ ಫಿಲೋಮಿನಾ ಲೋಬೊ ವಂದಸಿದರು ಕಾರ್ಯಕ್ರಮದಲ್ಲಿ ಹಿರಿಯ ವಿಧ್ಯಾರ್ಥಿ ಸಂಘದ ಪಧಾದಿಕಾರಿಗಳು, ಎಸ್‌ಡಿಎಂಸಿ ಪಧಾದಿಕಾರಿಗಳು ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.