ಪೆರಿಂಜೆ ಯ ಸಂತೃಪ್ತಿ ಭವನದಲ್ಲಿ ನಡೆಯಲಿರುವ ಬೆಳ್ತಂಗಡಿ ತಾಲೂಕು17 ನೇ ಕನ್ನಡ ಸಾಹಿತ್ಯ ಸಮ್ಮೇಳನ 2020 ಇದರ ಆಮಂತ್ರಣ ಬಿಡುಗಡೆ ಇಂದು ಧರ್ಮಸ್ಥಳ ಬೀಡಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹಗ್ಗಡೆಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಮೇಳನದ ಆಚರಣಾ ಸಮಿತಿ ಅಧ್ಯಕ್ಷ ಜಯರಾಜ್ ಕಂಬಳಿ ಪೆರಿಂಜೆಗುತ್ತು, ಕಾರ್ಯಾಧ್ಯಕ್ಷ ಧರಣೇಂದ್ರ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಡಾ.ಎಂ.ಪಿ ಶ್ರೀನಾಥ್, ತಾಲೂಕು ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್, ಸೊಮಶೇಖರ್ ಶೆಟ್ಟಿ ಉಜಿರೆ , ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿಕಾಸ್ ಜೈನ್ , ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಕುಮಾರ್ ಎರ್ಮೊಡಿ ಹಾಗು ಪ್ರಧಾನ ಸಂಚಾಲಕ ಇಸ್ಮಾಯಿಲ್ ಕೆ ಪೆರಿಂಜೆ ಮೊದಲಾದವರು ಉಪಸ್ಥಿತರಿದ್ದರು.