ಬೆಳ್ತಂಗಡಿ ಭಾರತ್ ಆಟೋ ಕಾರ್‍ಸ್  ನೂತನ ಕಾರು ವಿಟಾರ ಬ್ರೆಝಾ ಮಾರುಕಟ್ಟೆಗೆ ಬಿಡುಗಡೆ


ಬೆಳ್ತಂಗಡಿ : ಬೆಳ್ತಂಗಡಿ-ಉಜಿರೆ ಮುಖ್ಯರಸ್ತೆಯಲ್ಲಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬೆಳ್ತಂಗಡಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ್ ಆಟೋಕಾರ್‍ಸ್‌ನಲ್ಲಿ ನೂತನ ಕಾರು ವಿಟಾರ ಬ್ರೆಝಾವನ್ನು ಮಾ.7 ರಂದು ಮಾರುಕಟ್ಟೆಗೆ ಬಿಗುಗಡೆಗೊಳಿಸಲಾಯಿತು.


ಈ ಸಂದರ್ಭದಲ್ಲಿ ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಮಹೇಶ್ ಜೈನ್, ಬೆಳ್ತಂಗಡಿ ಕೆನರಾ ಬ್ಯಾಂಕ್‌ನ ಆಜೇಶ್ ಎಂ ವಿಲೋನ್, ಯುನೈಟೆಡ್ ಇನ್ಸೂರೆನ್ಸ್ ಕಂಪೆನಿಯ ನಿವೃತ್ತ ಅಧಿಕಾರಿ ಶೇಖ್‌ಕುಂಞ್ಜಿ, ಸುದ್ದಿಬಿಡುಗಡೆ ವಾರಪತ್ರಿಕೆಯ ಸಂತೋಷ್.ಪಿ.ಕೋಟ್ಯಾನ್ ಬಳಂಜ, ಭಾರತ್ ಬೀಡಿ ಸಂಸ್ಥೆಯ ಮ್ಯಾನೇಜರ್ ಸದಾಶಿವ ಶೆಟ್ಟಿ, ಸುಜ್ಞಾನ ಜೆ ಶಾಂತಿ, ಟ್ರೂ ವ್ಯಾಲ್ಯ್ ಮ್ಯಾನೇಜರ್ ಪ್ರವೀಣ್ ಕುಮಾರ್ ಹೆಚ್.ಎಸ್, ಟೀಮ್ ಲೀಡರ್ ಶ್ರೀಮಂದರ್ ಜೈನ್, ಮೊಹಮ್ಮದ್ ಅಸೀಫ್ ಅನೂಪ್‌ಎಂ ಬಂಗೇರ, ಕಿಶೋರ್ ಮ್ಯಾಥ್ಯು, ರಕ್ಷಿತ್ ಎ ಗೌಡ ಮತ್ತು ಭಾರತ್ ಆಟೋ ಕಾರ್‍ಸ್‌ನ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.


ಹೊಸ ವಿಟಾರ ಬ್ರೆಝಾ ವೈಶಿಷ್ಟ್ಯಗಳು
ಹೊಸ ವಿಟಾರ ಬ್ರೆಝಾ ಬಿಎಸ್೬ ಪೆಟ್ರೋಲ್ 6 ವಿವಿಧ ಬಣ್ಣಗಳಲ್ಲಿ ಮಾತ್ರವಲ್ಲದೆ 3 ವಿಶಿಷ್ಟವಾದ ಡ್ಯೂಲ್ ಟೋನ್ ಬಣ್ಣಗಳಲ್ಲೂ ಲಭ್ಯವಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 7.34  ಲಕ್ಷ ರೂಗಳಿಂದ ಪ್ರಾರಂಭವಾಗುತ್ತದೆ. ಈ ನೂತನ ವಿಟಾರ ಬ್ರೆಝಾ ಬೋಲ್ಡ್ ಫ್ರಂಟ್ ಗ್ರಿಲ್ ಪ್ರೊಜೆಕ್ಟರ್ ಆಟೋಮೈಲ್ ಹೆಡ್ ಲ್ಯಾಂಪ್, ಡ್ಯುಯಲ್ ಫಂಕ್ಷನ್ ಎಲ್‌ಇಡಿ ಡಿಆರ್‌ಎಲ್‌ಎಸ್, ಎಲ್ ಇಡಿ ಫಾಗ್ ಲ್ಯಾಂಪ್ಸ್, ಎಲ್‌ಇಡಿ ಟೈಲ್ ಲ್ಯಾಂಪ್ಸ್, ಪ್ರಿಸಿಸನ್ ಕಟ್ 16ಇಂಚು ಅಲ್ಲೋಯ್ಸ್ ವೀಲ್, ಲೆದರ್ ರ್ರಾಪ್ಡ್ ಸ್ಟಿಯರಿಂಗ್, ಸೀಟ್, 17.78 ಸೆಂ.ಮೀ ಸ್ಮಾರ್ಟ್ ಪ್ಲೇ ಸ್ಟಿಡಿಯೋ, ಸ್ಪೋರ್ಟಿ ಬ್ಕ್ಯಾಕ್ ಇಂಟಿರಿಯರ್, ಆಟೋ ಡಿಮ್ಮಿಂಗ್ ಆರ್‌ಯುಎನ್‌ಐ, ಆಟೋ ಫಲ್ಡಿಂಗ್ ಮಿರರ್ ಇತ್ಯಾದಿ ಅನೇಕ ವೈಶಿಷ್ಟ್ಯವನ್ನು ಹೊಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.