ಸುಲ್ಕೇರಿ : ಶ್ರೀ ಮಹಮ್ಮಾಯಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕೋತ್ಸವ ವೈಭವದ ಹೊರಕಾಣಿಕೆ ಮೆರವಣಿಗೆ, ತೊರಣ ಮೂಹೂರ್ತ

ಸುಲ್ಕೇರಿ : ಶ್ರೀ ಮಹಮ್ಮಾಯಿ ದೇವಸ್ಥಾನ ಭಂಡಾರಿಗೋಳಿ ಸುಲ್ಕೇರಿಯಲ್ಲಿ ದೇವರ ಸಾನಿಧ್ಯವೃದ್ಧಿ, ಅನುಗ್ರಹ ಪ್ರಾಪ್ತಿಗೆ ಸಾನಿಧ್ಯ ಬ್ರಹ್ಮಕಲಶಾಭಿಷೇಕೋತ್ಸವದ ಹಸಿರುವಾಣಿ ಹೊರಕಾಣಿಕೆಯ ವೈಭವದ ಮೆರವಣಿಗೆ ಹಾಗೂ ತೋರಣ ಮೂಹೂರ್ತ, ಉಗ್ರಾಣ ಮುಹೂರ್ತವು ಮಾ.6 ರಂದು ನಡೆಯಿತು.


ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಕೃಷ್ಣತಂತ್ರಿ ಉಗ್ರಾಣ ಮೂಹೂರ್ತವನ್ನು ನೇರವೇರಿಸಿ ಶುಭಕೋರಿದರು.


ಈ ಸಂದರ್ಭದಲ್ಲಿ ಬ್ರಹ್ಮಕಲಶಾಭಿಷೇಕೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಎಸ್.ಪಿ ಕಾರ್ಯದರ್ಶಿ ರವಿಶೆಟ್ಟಿ, ಆಡಳಿತ ಸಮಿತಿ ಅಧ್ಯಕ್ಷ ಸುರೇಶ್ ಭಟ್, ಜತೆ ಕಾರ್ಯದರ್ಶಿ ಶಂಕರ ಪೂಜಾರಿ, ಕೋಶಾಧಿಕಾರಿ ಸುರೇಶ್ ಭಟ್, ಉಪಾಧ್ಯಕ್ಷರುಗಳಾದ ಪ್ರಭಾಕರ ಮಂಜಿತ್ತಾಯ, ಡೀಕಯ್ಯ ಪೂಜಾರಿ, ಸುಂದರ ಶೆಟ್ಟಿ, ಡಾ| ಮನೋಜ್ ಕುಮಾರ್, ಯೋಗೀಶ್ ಪೂಜಾರಿ, ಗ್ರಾ.ಪಂ ಸದಸ್ಯ ನಾರಾಯಣ ಪೂಜಾರಿ ಪರಾರಿ, ನಿವೃತ್ತ ಅಧ್ಯಾಪಕ ವಸಂತ ರಾವ್, ಸಂಜೀವ ಶೆಟ್ಟಿ, ಆಡಳಿತ ಸಮಿತಿಯ ಕಾರ್ಯದರ್ಶಿ ಯಶೋಧರ ಪೂಜಾರಿ, ಉಪಾಧ್ಯಕ್ಷ ವಸಂತ ಪೂಜಾರಿ, ಸುಂದರ ಗೌಡ, ಕೋಶಾಧಿಕಾರಿ ವಿಠಲ ಶೆಟ್ಟಿ,

ಸಂಚಾಲಕರಾದ ಸದಾನಂದ ಗೌಡ ಸುಲ್ಕೇರಿ, ವಿಶ್ವನಾಥ ಶೆಟ್ಟಿ, ವಾಸುದೇವ ರಾವ್, ಗೋವಿಂದ ಗೌಡ, ಚಂದ್ರಕಾಂತ ಗೋರೆ, ಯಶೋಧರ ಪೂಜಾರಿ, ರಾಮಣ್ಣ ಶೆಟ್ಟಿ, ಮಹಾಬಲ ಶೆಟ್ಟಿ, ಯಶೋಧರ, ರಮೇಶ್ ಪೂಜಾರಿ, ಪ್ರೇಮಾ ಲೋಕಯ್ಯ ಪೂಜಾರಿ, ಹೇಮಲತಾ ಶೆಟ್ಟಿ, ಮಮತಾ ಶೆಟ್ಟಿ, ಗುರುರಾಜ್, ದಯಾಕರ ರೈ, ಶಿಕ್ಷಕ ಸತೀಶ, ಬಾಲಕೃಷ್ಣ ಮೂಲ್ಯ, ಸಂದೀಪ್, ದಿನೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಸರಸ್ವತಿ ರೈ ಹಾಗೂ ಊರ-ಪರವೂರ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.