ಬಂಗಾಡಿ ಕೊಲ್ಲಿ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಚಾಲನೆ

ಬೆಳ್ತಂಗಡಿ: 23ನೇ ವರ್ಷದ ಹೊನಲು ಬೆಳಕಿನ ಸೂರ್ಯ- ಚಂದ್ರ ಜೋಡುಕರೆ ಬಯಲು ಕಂಬಳಕ್ಕೆ ಬಂಗಾಡಿ ಕೊಲ್ಲಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಮಾ.7ರ ಬೆಳಗ್ಗೆ ಚಾಲನೆ ದೊರೆತಿದೆ.  ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಕಂಬಳದ ಉದ್ಘಾಟನೆ ನೆರವೇರಿಸಿದರು.


ಕಂಬಳದ ಕೋಣಗಳನ್ನು ಕರೆಗೆ ಇಳಿಸುವ ಸಮಯವು ಹಗ್ಗ ಕಿರಿಯ 12ಗಂಟೆಗೆ ಆರಂಭವಾಗಿ, ಮಧ್ಯಾಹ್ನ 12.30ಕ್ಕೆ ನೇಗಿಲು ಕಿರಿಯ, 1ಗಂಟೆಗೆ ನೇಗಿಲು ಹಿರಿಯ, ಹಗ್ಗ ಹಿರಿಯ ಅಪರಾಹ್ನ 3ಗಂಟೆಗೆ, ಅಡ್ಡಹಲಗೆ ೪ಗಂಟೆಗೆ, ಕೆನೆಹಲಗೆ 4ಗಂಟೆಗೆ ನಡೆಯಲಿದೆ. ಸಮಾರಂಭದಲ್ಲಿ ರೆಹೆಮಾನಿಯ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಕಾಜೂರುನ ಅಧ್ಯಕ್ಷರಾದ ಕೆ.ಯು ಇಬ್ರಾಹಿಂ, ಸೂರ್ಯ -ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ರಂಜನ್ ಜಿ.ಗೌಡ, ಭರತ್ ಕುಮಾರ್, ಧಾರ್ಮಿಕ ದತ್ತಿ ಇಲಾಖೆ ಸದಸ್ಯರಾದ ಮುಕುಂದ ಸುವರ್ಣ, ಕೃಷ್ಣಪ್ಪ ಪೂಜಾರಿ, ಕಂಬಳ ಸಮಿತಿ ಕಾರ್ಯದರ್ಶಿ ಆನಂದ್ ಗೌಡ, ಕಿಶೋರ್ ವಳಂಬ್ರ, ಹಾರ್ತಕಜೆ ಸೀತಾರಾಮ ಗೌಡ, ಕಾಜೂರು ತುಂಗಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.