HomePage_Banner_
HomePage_Banner_

ಪುತ್ರಬೈಲು ಲೃಾಲ ಶೀ ಮಹಾಮ್ಮಾಯಿ ಅಮ್ಮನವರ ಮಾರಿ ಪೂಜಾ ಮಹೋತ್ಸವಕ್ಕೆ ಚಪ್ಪರ ಅಲಂಕಾರ ಮುಹೂರ್ತ

ಬೆಳ್ತಂಗಡಿ; ಶ್ರೀ ಮಹಮ್ಮಾಯಿ ಸೇವಾ ಸಮಿತಿ ಅಶ್ವತಕಟ್ಟೆ ಪುತ್ರಬೈಲು ಲೃಾಲ ಫೆ.15 ರಿಂದ 19ರ ತನಕ ಅದ್ದೂರಿಯಾಗಿ ನಡೆಯಲಿರುವ ಶ್ರೀ ಮಹಾಮ್ಮಾಯಿ ಅಮ್ಮನವರ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠೆ ಕಲಷಾಭೀಶೇಕ ಮಹೋತ್ಸವ ಹಾಗೂ ಮಾರಿ ಪೂಜೆಯ ಅಂಗವಾಗಿ ಮಾ.6ರಂದು  ಅಶ್ವತ್ಥಕಟ್ಟೆ ಪುತ್ರಬೈಲು ಚಪ್ಪರ ಮುಹೂರ್ತ ಕಾರ್ಯಕ್ರಮಕ್ಕೆ ಸಮಿತಿಯ ಅಧ್ಯಕ್ಷರಾದ ಎಲ್ ಈಶ್ವರ ಬೈರ ರವರಿಂದ ಚಾಲನೆ ನೀಡಲಾಯಿತು.

ಸಮಿತಿಯ ಸಂಚಾಲಕರಾದ ಚಂದು ಎಂ, ಹಾಗೂ ಸಹ ಸಂಚಾಲಕರಾದ ಗುರುವಪ್ಪ ಮುಂಡೇಲು ರವರು ಸಹಭಾಗಿತ್ವದಲ್ಲಿ ಭಾಗಿಯಾಗಿದ್ದರು. ಸೇವಾ ಸಮಿತಿಯ ಉಪಾಧ್ಯಕ್ಷರಾದ ವಸಂತ ರಾಣಿ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಲೃಾಲ, ಕೋಶಾಧಿಕಾರಿ ಎಚ್ ಬಿ ಸೀತಾರಾಮ, ಸಾಮಾಜಿಕ ಜಾಲತಾಣ ಸಂಚಾಲಕರಾದ ನಾಗರಾಜ್ ಎಸ್ ಲೃಾಲ, ಸಮಿತಿಯ ಸದಸ್ಯರಾದ ಎನ್ ಸಿ ಚಂದು ಅಂಬೇಡ್ಕರ್ ನಗರ, ಗಂಗಾಧರ ಪುತ್ರಬೈಲು, ಎಚ್ ಬಿ ಸಂಜೀವ, ಸುಂದರ್ ಎನ್ ಕೆ, ಕೃಷ್ಣಪ್ಪ ಸಿ, ಸಂತೋಷ್ ಪುತ್ರಬೈಲು, ರಾಮಪ್ಪ ಗಾಂಧಿನಗರ ರಮೇಶ್ ಸುರೇಶ್ ವಿ ಎಸ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.