ರುದ್ರಗಿರಿ ಶ್ರೀ ಮೃತ್ಯುಂಜಯ ದೇವರ ಶಿಲಾಬಿಂಬದ ಅದ್ಧೂರಿ ಮೆರವಣಿಗೆ

ತಣ್ಣೀರುಪಂತ: ರುದ್ರಗಿರಿ ಶ್ರೀ ಮೃತ್ಯುಂಜಯ ಹಾಗೂ ಪರಿವಾರ ಶ್ರೀದೇವರ ಶಿಲಾಬಿಂಬದ ಮೆರವಣಿಗೆಯಲ್ಲಿ ಶಿವಲಿಂಗ, ಗಣಪತಿ, ಸೀತಾರಾಮ, ನಂದಿ ದೇವರ ಶಿಲಾಮಯ ವಿಗ್ರಹವನ್ನು ದೇವಸ್ಥಾನಕ್ಕೆ ಮಡಂತ್ಯಾರು ಪೇಟೆಯಿಂದ ರುದ್ರಗಿರಿ ಕ್ಷೇತ್ರಕ್ಕೆ ವಿಜೃಂಭಣೆಯಿಂದ ಕೊಂಡೊಯ್ಯಲಾಯಿತು.


ಉತ್ಸವ ಮೂರ್ತಿ ಕೊಡುಗೆ : ಉದ್ಯಮಿ ಕನ್ಯಾನ ಗುದ್ಯಾ ಮೆಗಿನ ಗುತ್ತು ಶ್ರೀಧರ ಶೆಟ್ಟಿಯವರು ರುದ್ರಗಿರಿ ಮೃತ್ಯುಂಜಯ ದೇವರ ಉತ್ಸವ ಮೂರ್ತಿಯನ್ನು ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು.


ಅದ್ಧೂರಿ ಮೆರವಣಿಗೆ ನೇತೃತ್ವವನ್ನು ಪ್ರಭಾಕರ ಗೌಡ ಪೊಸಂದೋಡಿ,ಮಿಥೇನ್ ಕುಲಾಲ್ ಹಾಗೂ ಯುವಕರು ವಹಿಸಿದರು.ಈ ಸಂದರ್ಭದಲ್ಲಿ ಬ್ರಹ್ಮ ಶ್ರೀ ವೇದ ಮೂರ್ತಿ ಶ್ರೀ ಬಿ.ಕೇಶವ ಜೇಗಿತ್ತಾಯ ಬಂಗಲಾಯಿ,ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ,ಕೊಣಾಜೆ ಕಲ್ಲು ಸಿದ್ಧಾಶ್ರಮ ಮಠದ ಗಣೇಶ್ ಗುರೂಜಿ,ಉದ್ಯಮಿಗಳಾದ ಅನಂತರಾಮ ಜೋಗಿತ್ತಾಯ ಬಂಗಲಾಯಿ,ಚರಣ್ ಭಂಡಾರಿ ಮಂಗಳೂರು,ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ,ಮೂರ್ತಿ ಶಿಲ್ಪಿ ಪ್ರವೀಣ್ ನಾರಾವಿ,ಕಾರ್ಯಾಧ್ಯಕ್ಷ ಮಾಧವ ಜೋಗಿತ್ತಾಯ,ವ್ಯವಸ್ಥಾಪನ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಡಾಪ್ಪಡಿ, ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ ಗೌಡ ಪೊಸಂದೋಡಿ,ಪೂವಪ್ಪ ಬಂಗೇರ, ಜಯಪ್ರಕಾಶ್ ಭಟ್ ಎಕ್ಕಳ,ಕೋಶಾಧಿಕಾರಿ ಚಂದ್ರಹಾಸ ಪಕಳ,ವ್ಯವಸ್ಥಾನ ಸಮಿತಿ ಸದಸ್ಯೆ ಶ್ರೀಮತಿ ರೋಹಿಣಿ ಚಂದ್ರ ಹಾಸ ಪಕಳ, ಪೂವಪ್ಪ ಬಂಗೇರ ಅಳಕೆ,ಪ್ರಧಾನ ಅರ್ಚಕ ಅಶೋಕ್ ಭಟ್,ವಜ್ರ ಕುಮಾರ್ ಅಂತರ, ಗೌರವ ಸಲಹೆಗಾರರಾ ಪದ್ಮ ರಾಜ ಅಜಿಲ ಅಂತರ, ರಂಗಪ್ಪ ಪೂಜಾರಿ ಅಳಕೆ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಕುಮಾರ್ ಅಳಕೆ, ದಿನೇಶ್ ಗೌಡ ಪೊಸಂದೋಡಿ ಮತ್ತು ವಿವಿಧ ಸಮಿತಿ ಸದಸ್ಯರು,ಪದಾಧಿಕಾರಿಗಳು,ಮಹಿಳೆಯರು,ಭಕ್ತಾದಿಗಳು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಸುಮಾರು 800 ಜನ ಭಕ್ತಾದಿಗಳಿಗೆ ಸಿಹಿ-ತಿಂಡಿ, ಫಲಹಾರದ ವ್ಯವಸ್ಥೆಯನ್ನು ನೆಲ್ಲಿಕಟ್ಟೆ ಜಗನ್ನಾಥ ಶೆಟ್ಟಿ ಪುತ್ತೂರು ಮತ್ತು ತುಳಸಿ ಕೇಟರರ್ಸ ಕೇಪುಲ ಪುತ್ತೂರು ನೀಡಿ ಸಹಕರಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.