ಬೆಳ್ತಂಗಡಿ ಡಯಾಲಿಸಿಸ್ ಕೇಂದ್ರದಿಂದ ಆಸ್ಪತ್ರೆಗೆ ಲಕ್ಷಾಂತರ ರೂ. ಚುಚ್ಚುಮದ್ದು ಬಿಲ್ಲು ಪಾವತಿ ಬಾಕಿ!?

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಖಾಸಗಿ ಕಂಪೆನಿ ಒಪ್ಪಂದದ ಮೇರೆಗೆ ನಡೆಸುತ್ತಿರುವ ಡಯಾಲಿಸ್ ಘಟಕಕ್ಕೆ ಚಚ್ಚುಮದ್ದು ಸರಬರಾಜು ಮಾಡಿದ ಬಗ್ಗೆ ಸರಕಾರಿ ಆಸ್ಪತ್ರೆಗೆ ಎರಡೂವರೆಗೆ ಲಕ್ಷಕ್ಕೂ ಅಧಿಕ ಮೊತ್ತ ಪಾವತಿಗೆ ಬಾಕಿ ಇದೆ.

ಜಿ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ ಎಂ ಕಲ್ಮಂಜ ಮತ್ತು ತಾ.ಪಂ ಸದಸ್ಯ ಸುಧಾಕರ್ ಬಿ.ಎಲ್ ಅವರ ನಿಯೋಗ ದೂರಿನ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ರಾಜ್ಯದಿಂದ ಟೆಂಡರ್ ಪಡೆದ ಹೈದರಾಬಾದ್ ಮೂಲದ ಇಎಸ್‌ಕೆಎಜಿ ಸಂಜೀವಿನಿ ಎಂಬ ಸಂಸ್ಥೆ ಒಪ್ಪಂದದಂತೆ ಡಯಾಲಿಸಿಸ್ ಘಟಕ ನಡೆಸುತ್ತಿದೆ. ಸರಕಾರಿ ಆಸ್ಪತ್ರೆಯಿಂದ ಈ ಘಟಕಕ್ಕೆ ಸಭಾಂಗಣ, ವಿದ್ಯುತ್ ವ್ಯವಸ್ಥೆ, ನೀರಿನ ಸೌಲಭ್ಯ, ಅಗತ್ಯ ಆಸನಗಳು ಇವೆಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಜನರೇಟರ್‌ಗೆ ಡೀಸಿಲ್ ಆನ್ನೂ ಕೂಡ ಭರಿಸಲಾಗುತ್ತಿದೆ.

ಡಯಾಲಿಸಿಸ್ ಕೇಂದ್ರದಲ್ಲಿ ನಿಯಮಾನುಸಾರ ಇರಬೇಕಾದ ತಂತ್ರಜ್ಞರು, ದಾದಿಯರು, ಗ್ರೂಪ್ ಡಿ ಸಿಬ್ಬಂದಿಗಳನ್ನು ಟೆಂಡರ್ ಪಡೆದಿರುವ ಕಂಪೆನಿಯೇ ನೇಮಿಸಿಕೊಳ್ಳಬೇಕು. ಅಂತೆಯೇ ರೋಗಿಗಳಿಗೆ ಬೇಕಾದ ರಕ್ತ ಕಣಗಳಿಗೆ ಸಂಬಂಧಿಸಿದ ಚುಚ್ಚುಮದ್ದು ಖರೀದಿ ವ್ಯವಸ್ಥೆ ಮತ್ತು ಅದನ್ನು ಶೇಖರಿಸಿಟ್ಟುಕೊಳ್ಳುವ ರೆಫ್ರಿಜರೇಟರ್ ಇಟ್ಟುಕೊಳ್ಳಬೇಕಾಗಿದ್ದರೂ ಅದ್ಯಾವ ವ್ಯವಸ್ಥೆಯೂ ಇಲ್ಲಿ ಇಲ್ಲ. ಆದರೆ ರೋಗಿಗಳ ಹಿತದೃಷ್ಟಿಯಿಂದ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸೂಚನೆ ಮೇರೆಗೆ ಚುಚ್ಚುಮದ್ದು ವ್ಯವಸ್ಥೆಯನ್ನು ಸರಕಾರಿ ಆಸ್ಪತ್ರೆಯಿಂದ ಒದಗಿಸಿಕೊಡಲಾಗುತ್ತಿದೆ.

ಗುತ್ತಿಗೆ ವಹಿಸಿಕೊಂಡಿರುವ ಸಂಜೀವಿನಿ ಸಂಸ್ಥೆಗೆ ಸರಕಾರದಿಂದ ಒಂದು ರೋಗಿಗೆ ಇಷ್ಟು ಎಂಬಂತೆ ಹಣ ಪಾವತಿಯಾಗುತ್ತಿದ್ದರೂ, ಅವರ ಕಡೆಯಿಂದ ಆಸ್ಪತ್ರೆಗೆ ಬಿಲ್ಲು ಪಾವತಿಯಾಗಿಲ್ಲ.
ಈ ವಿಚಾರ ಅರಿತು ಭೇಟಿನೀಡಿದ ನಿಯೋಗ ತರಾಟೆಗೆ ತೆಗೆದುಕೊಂಡಿದ್ದು, ಮುಂದಕ್ಕೆ ಇದರ ಟೆಂಡರ್ ವಹಿಸಿಕೊಂಡಿರುವ ಜಿಲ್ಲಾ ಮಟ್ಟದ ಉಸ್ತುವಾರಿ ನೋಡಿಕೊಳ್ಳುವವನ್ನು ಭೇಟಿ ಮಾಡಿ ಮಾತುಕತೆ ನಡೆಸಿ ವ್ಯವಸ್ಥೆ ಸರಿಪಡಿಸುವಂತೆ ಆಜ್ಞೆ ಮಾಡುವುದಾಗಿ ನಿಯೋಗ ಸುದ್ದಿ ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.