ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡೆಯಲ್ಲಿ 10 ಪದಕ ಗೆದ್ದ ಬೆಳ್ತಂಗಡಿಯ ಸೌಮ್ಯಾ, ಗೌತಮಿ, ಪ್ರಿಯಾಂಕಾ

ಬೆಳ್ತಂಗಡಿ: ಫೇಡಾನಗರಿ ಧಾರವಾಡದಲ್ಲಿ ನಡೆದ ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಕೆ.ಸೌಮ್ಯಾ, ಗೌತಮಿ, ಪ್ರಿಯಾಂಕಾ ಒಟ್ಟು 10 ಪದಕಗಳನ್ನು ಬಾಚಿದ್ದಾರೆ. ಮಾ.1ರಂದು ಕೊನೆಗೊಂಡ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಕಾಶಿಪಟ್ನದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಇಂದಬೆಟ್ಟುವಿನ ಕೆ.ಸೌಮ್ಯಾ ಅವರು 35ರಿಂದ 45ವರ್ಷದೊಳಗಿನವರ ಮಹಿಳೆಯರ ವಿಭಾಗದ 400ಮೀಟರ್ ಓಟದಲ್ಲಿ ಚಿನ್ನದ ಪದಕ, 2೦೦ ಮೀಟರ್ ಓಟದಲ್ಲಿ ಬೆಳ್ಳಿ, ಲಾಂಗ್‌ಜಂಪ್‌ನಲ್ಲಿ ಕಂಚು, 4*1೦೦ ಮೀಟರ್ ರಿಲೆಯಲ್ಲಿ ಚಿನ್ನ ಮತ್ತು 4*4೦೦ ಮೀ.ರಿಲೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ ವಿಭಾಗದ ಐದೂ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ಪದಕ ಜಯಿಸಿದ ಹೆಮ್ಮೆ ಸೌಮ್ಯಾ ಅವರದ್ದಾಗಿದೆ.
ಬೆಳ್ತಂಗಡಿ ತಾಲೂಕು ಕಚೇರಿಯ ಕಂದಾಯ ವಿಭಾಗದಲ್ಲಿರುವ ಪ್ರಿಯಾಂಕಾ 1೦೦, 2೦೦ ಮೀಟರ್ ಓಟದಲ್ಲಿ ಬೆಳ್ಳಿ ಪದಕಗಳು, ೪*೧೦೦ ರಿಲೆಯಲ್ಲಿ ಚಿನ್ನ, ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕವನ್ನು ಸೂರೆ ಮಾಡಿದ್ದಾರೆ.
ಬೆಳಾಲಿನಲ್ಲಿ ಗ್ರಾಮಕರಣಿಕರಾಗಿರುವ ಗೌತಮಿ 4*1೦೦ ರಿಲೆಯಲ್ಲಿ ಚಿನ್ನದ ಪದಕ ಗೆದ್ದು ಈ ಮೂವರು ಸರಕಾರಿ ನೌಕರರು ತಾಲೂಕಿಗೆ ಕೀರ್ತಿ ತಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.