ಪುರುಷರ ಕುಣಿತಕ್ಕೆ ಸಂದ ಗೌರವ ರುಕ್ಮಯ್ಯ ಗೌಡರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ಜಾನಪದ ಅಕಾಡೆಮಿ ಜಾನಪದ ಕಲಾವಿದರಿಗೆ ನೀಡುವ ೨೦೧೯ನೇ ಸಾಲಿನ ವಾರ್ಷಿಕ ಗೌರವ ಪ್ರಶಸಿಗೆ ಸುಮಾರು ೬೦ ವರ್ಷ `ಪುರುಷ ವೇಷ’ ಕಲಾ ಪ್ರಕಾರದಲ್ಲಿ ಪ್ರಖ್ಯಾತಿಯನ್ನು ಗಳಿಸಿರುವ ಪುದುವೆಟ್ಟು ಗ್ರಾಮದ ಕೊಡಪಟ್ಯಾ ನೇರೊಲ್ದಡಿ ನಿವಾಸಿ ೮೦ ವರ್ಷ ಪ್ರಾಯದ ರುಕ್ಮಯ್ಯ ಗೌಡ (ಬಾಬಣ್ಣ) ಪಾತ್ರರಾಗಿದ್ದಾರೆ.

ಬೆಳ್ತಂಗಡಿ- ಪುತ್ತೂರು ಸುಳ್ಯ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿರುವ ಜಾನಪದ ಕಲೆ ಪುರುಷರ ವೇಷ (ಸಿದ್ಧವೇಷ) ಕುಣಿತಕ್ಕೆ ಇದೇ ಮೊದಲ ಬಾರಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಪುರುಷ ವೇಷ ಹಾಕುವ ಕಲಾವಿದರಿಗೆ ಗೌರವವನ್ನು ತಂದಿದೆ. ಫೆ.೧೫ರಂದು ನಡೆದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಾರ್ಷಿಕ ಪ್ರಶಸ್ತಿಯು ರೂ.೨೫ ಸಾವಿರ ಹಾಗೂ ಪುರಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿಯನ್ನು ಬಳ್ಳಾರಿಯಲ್ಲಿ
ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾವುದು ಎಂದು ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ತಿಳಿಸಿದ್ದಾರೆ.

ಕರ್ನಾಟಕ ಜಾನಪದ ಅಕಾಡೆಮಿಯು ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ನೇರೊಳ್ದಡಿ ನಿವಾಸಿ ರುಕ್ಮಯ್ಯ ಗೌಡ ಅವರು ಸುಮಾರು ೬೦ ವರ್ಷಗಳಿಂದ ಪಾರಂಪರಿಕವಾದ ತುಳುನಾಡಿನ ಹಳ್ಳಿಗಳಲ್ಲಿ ಕಾಣಸಿಗುವ ಸಿದ್ಧವೇಷ( ಸನ್ಯಾಸಿ ವೇಷ) ಕುಣಿತದಲ್ಲಿ ಹೆಸರುವಾಸಿಯಾಗಿದ್ದಾರೆ.

ಪ್ರಗತಿಪರ ಕೃಷಿಕರಾಗಿ ತಮ್ಮ ಜೀವನ ಸಾಗಿಸುತ್ತಾ ಬಂದಿರುವ ೮೦ ವರ್ಷ ವಯಸ್ಸಿನ ರುಕ್ಮಯ್ಯ ಗೌಡ ಅವರು ತಮ್ಮ ತಂದೆಯವರಿಂದ ಈ ಕಲಾಪ್ರಕಾರವನ್ನು ಕಲಿತು. ಅವರ ಕಾಲದಿಂದಲೂ ವಂಶಪಾರಂಪರೆಯಾಗಿ ಈ ಕಲೆಯನ್ನು ಉಳಿಸುತ್ತಾ ಬಂದವರು. ಸುಗ್ಗಿ ಹುಣ್ಣಿಮೆಯ ಸಮಯದಲ್ಲಿ ಪುರುಷ ಕುಣಿತ ಕಾರ್ಯಕ್ರಮ ನಡೆಯುತ್ತಿದ್ದು, ಈ ತಂಡದಲ್ಲಿ ವೇಷ ತೊಟ್ಟು ನಿಗದಿತ ೭ ದಿನ ಗ್ರಾಮ ಹಾಗೂ ಹೊರ ಗ್ರಾಮಗಳಿಗೆ ತೆರಳಿ ಕಲಾ ಪ್ರದರ್ಶನ ನೀಡಿ, ಪ್ರಖ್ಯಾತಿಯನ್ನು ಪಡೆದಿದ್ದಾರೆ. ಇವರು ಇಬ್ಬರು ಪುತ್ರಿಯರು ಹಾಗೂ ಮೂವರು ಪುತ್ರರ ಸುಖಿ ಕುಟುಂಬವನ್ನು ಹೊಂದಿದ್ದಾರೆ. ಇವರ ಮಕ್ಕಳು ಕೂಡಾ ವಿವಿಧ ಸಿದ್ಧವೇಷದಲ್ಲಿ ಭಾಗಿಯಾಗುತ್ತ ಈ ಕಲಾ ಪರಂಪರೆಯನ್ನು ಉಳಿಸುವಲ್ಲಿ ಸಹಕಾರ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.