ಕಣಿಯೂರು 5ನೇ ವರ್ಷದ ಮಹಮ್ಮಾಯಿ ಪ್ರತಿಷ್ಠಾ ಮಹೋತ್ಸವ,ಗೋಂದಲ ಪೂಜೆ

Advt_NewsUnder_1
Advt_NewsUnder_1
Advt_NewsUnder_1

ಕಣಿಯೂರು : ಇಲ್ಲಿಯ ಶಿವಾಜಿ ನಗರದ ಶ್ರೀ ಮಹಮ್ಮಾಯಿ ಮರಾಟಿ ಸಂಘದ ವತಿಯಿಂದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಹಾಗೂ ಗೋಂದಲ ಪೂಜೆ ಫೆ.27 ಮತ್ತು ಫೆ.28 ರಂದು ಜರುಗಿತು.

ಫೆ.27 ರಂದು ಮಧ್ಯಾಹ್ನ ದೇವಿ ಸನ್ನಿಧಿಯಲ್ಲಿ ಗಣಪತಿ ಗಣಹೋಮ,ಶ್ರೀ ದೇವಿಗೆ ಕಲಶಾಭಿಷೇಕ,ಮಹಾ ಪೂಜೆ,ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ವೇ.ಮೂ.ಕೆ.ಎಮ್.ಸುಬ್ರಮಣ್ಯ ಮುಚ್ಚಿನಾಯ ರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ಫೆ.28 ರಂದು ರಾತ್ರಿ ಶ್ರೀ ಮಹಮ್ಮಾಯಿ ಮರಾಟಿ ಸೇವಾ ಸಂಘ ಊರಿನ-ಪರ ಊರಿನ ಭಕ್ತಾದಿಗಳ ಸಹಾಯದಿಂದ ಶ್ರೀದೇವಿ ಸನ್ನಿಧಿಯಲ್ಲಿ ಗುಮ್ಮಟೆ ನೃತ್ಯ, ಗೋಂದಲ ಪೂಜೆ,ಪ್ರಸಾದ ವಿತರಣೆ ಕಾರ್ಯಕ್ರಮ  ನಡೆಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಣಿಯೂರು ಪಂಚಾಯತ ಅಧ್ಯಕ್ಷ ಸುನಿಲ್ ಕೋಟ್ಯಾನ್,ಪಂಚಾಯತ ಸದಸ್ಯರು, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು,ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ,ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ವಂಜಾರೆ,ಗುರುವಾಯನಕೆರೆ ಗೋವಿಂದ ನಾಯ್ಕ ದಂಪತಿಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಅಡಳಿತ ಸಮಿತಿ ಗೌರವಾಧ್ಯಕ್ಷ ಪುತ್ತುನಾಯ್ಕ ಕುಡುವಂತಿ,ಅಧ್ಯಕ್ಷ ಬಾಬು ನಾಯ್ಕ ಮೈಪಾಜೆ,ಉಪಾಧ್ಯಕ್ಷ ತಿಲಕ್ ಕುಡುವಂತಿ,ಕಾರ್ಯದರ್ಶಿ ರುಕ್ಮಯ ನಾಯ್ಕ ವಳಬಾವು,ಜೊತೆ ಕಾರ್ಯದರ್ಶಿ ಸೀತಾರಾಮ ನಾಯ್ಕ ಅಂತರ,ಉಮೇಶ ನಾಯ್ಕ ಕುಕ್ಕದಡಿ,ಲೆಕ್ಕ ಪರಿಶೋಧಕ ಉಮೇಶ ನಾಯ್ಕ ಕೇಲ್ದಡ್ಕ,ಕೋಶಾಧಿಕಾರಿ ಸಂಜೀವ ನಾಯ್ಕ ಕೊರಂಟಾಜೆ, ಪೂಜಾ ಸಮಿತಿ ಕೃಷ್ಣ ನಾಯ್ಕ ಒಳಬಾವು,ಕುಶಾಲಪ್ಪ ನಾಯ್ಕ ಕುಕ್ಕುದಡಿ,ಮೋಹನ್ ನಾಯ್ಕ ಕೋರ್ಯರು,ಹೇಮಂತ್ ನಾಯ್ಕ ಪೇರಳ್ ಗುಡ್ಡೆ,ದೇವಪ್ಪ ನಾಯ್ಕ ಪೇರಲ್ ಗುಡ್ಡೆ,ನಿವೃತ್ತ ಸೈನಿಕ ಜತ್ತಪ್ಪ ನಾಯ್ಕ ಬೊಳ್ಳವು,ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ರಾಮಕೃಷ್ಣ ನಾಯ್ಕ ಪಿಂಡಿವನ ಹಾಗೂ ಸಂಘದ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.