ತಾಲೂಕಿನ ಅರ್ಹ ಫಲಾನುಭವಿಗಳಿಗೆ ಶಾಸಕರಿಂದ 94ಸಿ ಹಕ್ಕುಪತ್ರ ವಿತರಣೆ

ಗ್ರಾಮ ಪಂಚಾಯತ್‌ ಅಳದಂಗಡಿ 

ಬೆಳ್ತಂಗಡಿ: ಕಂದಾಯ ಇಲಾಖೆಯಿಂದ ಕೊಡಲ್ಪಡುವ ೯೪ಸಿ ಹಕ್ಕುಪತ್ರ ಹಾಗೂ ಇತರ ಸೌಲಭ್ಯಗಳ ವಿತರಣೆಯನ್ನು ತಾಲೂಕಿನ ಅರ್ಹ ಫಲಾನುಭವಿಗಳಿಗೆ ಆಯಾ ಗ್ರಾಮಗಳ ಗ್ರಾಮ ಪಂಚಾಯತ್‌ಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಶಾಸಕ ಹರೀಶ್ ಪೂಂಜ ವಿತರಿಸಿದರು.

ಗ್ರಾಮ ಪಂಚಾಯತ್‌ ಪಡಂಗಡಿ 

ಪಂಚಾಯತ್‌ನಲ್ಲಿ ಮಾ.೨ರಂದು ಹಕ್ಕುಪತ್ರಗಳ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಬೆಳ್ತಂಗಡಿಯ ಜನರು ನನ್ನನ್ನು ಅವರ ಪ್ರತಿನಿಧಿಯಾಗಿ ಚುನಾಯಿಸಿದ ನಂತರ ಸರಕಾರಿ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರಕಾರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕರಿಸುತ್ತಿದ್ದಾರೆ.

ಗ್ರಾಮ ಪಂಚಾಯತ್‌ ನಾರಾವಿ 

೯೪ ಸಿ ಹಕ್ಕುಪತ್ರಗಳ ಹಾಗೂ ಇತರ ಸೌಲಭ್ಯಗಳ ಅರ್ಹ ಫಲಾನುಭವಿಗಳು ತಮ್ಮ ಹೆಸರನ್ನು ಗ್ರಾಮಕರಣಿಕರಲ್ಲಿ ಪರಿಶೀಲಿಸಿಕೊಂಡು ಕ್ಲಪ್ತ ಸಮಯಕ್ಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಾಜರಿರಲು ಶಾಸಕ ಹರೀಶ್ ಪೂಂಜ ವಿನಂತಿಸಿದ್ದಾರೆ.

ಗ್ರಾಮ ಪಂಚಾಯತ್‌  ಕುಕ್ಕೇಡಿ

ಮಾ.೨ರಂದು ಪಡಂಗಡಿ, ಗರ್ಡಾಡಿ, ಕುಕ್ಕೇಡಿ, ನಿಟ್ಟಡೆ, ವೇಣೂರು, ಬಜಿರೆ, ಕರಿಮಣೇಲು. ಮೂಡುಕೋಡಿ, ಅಂಡಿಂಜೆ , ಸಾವ್ಯ, ಕೊಕ್ರಾಡಿ, ನಾರಾವಿ, ಕುತ್ಲೂರು, ನಾವರ, ಸುಲ್ಕೇರಿ, ಕುದ್ಯಾಡಿ, ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು,ಶಿರ್ಲಾಲು, ಕರಂಬಾರು, ಮೇಲಂತಬೆಟ್ಟು, ಮುಂಡೂರು, ಸವಣಾಲು, ಬಳೆಂಜ, ತೆಂಕಕಾರಂದೂರು, ನಾಲ್ಕೂರು, ಮರೋಡಿ, ಪೆರಾಡಿ, ಕಾಶಿಪಟ್ನ, ಹೊಸಂಗಡಿ, ಬಡಕೋಡಿ, ಆರಂಬೋಡಿ ಹಾಗೂ ಗುಂಡೂರಿ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಆಯಾ ಗ್ರಾಮ ಪಂಚಾಯತ್ ಸಭಾಂಗಣಗಳಲ್ಲಿ ೯೪ಸಿ ಹಕ್ಕುಪತ್ರಗಳನ್ನು ಶಾಸಕರು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.