ಉಜಿರೆ ಕಾಲೇಜು ಪ್ರಾಂಶುಪಾಲ ಸತೀಶ್ಚಂದ್ರರಿಗೆ ಪಿ.ಎಚ್.ಡಿ ಪದವಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್ ಸತೀಶ್ಚಂದ್ರ ಅವರ ಸಂಶೋಧನಾ ಅಧ್ಯಯನ ಪ್ರಬಂಧ ಮನ್ನಿಸಿ ತುಮಕೂರು ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.  ಭೌತಶಾಸ್ತ ವಿಭಾಗದ ಪ್ರಾಧ್ಯಾಪಕರಾಗಿರುವ ಸತೀಶ್ಚಂದ್ರ ಅವರು “ಸಿಂಥೆಸಿಸ್ ಗ್ರೋಥ್ ಆಂಡ್ ಸ್ಟ್ರಕ್ಚರಲ್ ಇನ್ವೆಷ್ಟಿಗೇಷನ್ ಆಫ್ ಟಿಟಿ ಕಂಜುಗೇಟೆಡ್ ನಾನ್ ಲಿನಿಯರ್ ಒಪ್ಟಿಕಲ್ ಮಟೀರಿಯಲ್ ಎಂಬ ವಿಷಯದ ಮೇಲೆ ಪಿ.ಎಚ್.ಡಿ ಪ್ರಬಂಧ ಮಂಡಿಸಿದ್ದರು.
ಉಜಿರೆಯ ಎಸ್.ಡಿ.ಎಂ ಸಂಶೋಧನಾ ಕೇಂದ್ರದ ಡಾ. ನಂದಕುಮಾರ್.ಎಂ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸತೀಶ್ಚಂದ್ರರು ಪಿ.ಎಚ್.ಡಿ ಅಧ್ಯಯನ ಕೈಗೊಂಡಿದ್ದರು. ಫೆ.೨೫ರಂದು ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ ೧೩ನೇ ಘಟಿಕೋತ್ಸವದಲ್ಲಿ ಸತೀಶ್ಚಂದ್ರರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ರಾಜ್ಯಪಾಲ ವಜುಬಾಯ್‌ವಾಲ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.