ಮಾ.6ರಿಂದ 8 ಸುಲ್ಕೇರಿ ಶ್ರೀ ಮಹಮ್ಮಾಯಿ ದೇವಸ್ಥಾನದ ಸಾನಿಧ್ಯ ಬ್ರಹ್ಮಕಲಶಾಭಿಷೇಕೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸುಲ್ಕೇರಿ: ಶ್ರೀ ಮಹಮ್ಮಾಯಿ ದೇವಸ್ಥಾನ ಭಂಡಾರಿಗೋಳಿಯಲ್ಲಿ ದೇವರ ಸಾನಿಧ್ಯ ವೃದ್ಧಿ, ಅನುಗ್ರಹ ಪ್ರಾಪ್ತಿಗೆ ಕೇಮೊಟ್ಟುಗುತ್ತು ವೇದಮೂರ್ತಿ ಶ್ರೀ ಪ್ರಭಾಕರ ಮಂಜಿತ್ತಾಯರ ನೇತೃತ್ವದಲ್ಲಿ ಎಡಪದವು ನಾರಾಯಣ ತಂತ್ರಿಗಳ ಮಾಗದರ್ಶನದಲ್ಲಿ ಸಾನಿಧ್ಯ ಬ್ರಹ್ಮಕಲಶಾಭಿಷೇಕೋತ್ಸವವು ವಿವಿಧ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.6ರಿಂದ 8ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಮಾ.೬ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ , ತೋರಣ ಮೂಹೂರ್ತ ಗಂಟೆ ೧೦ರಿಂದ ಶ್ರೀ.ಕ್ಷೆ.ಧ.ಗ್ರಾ.ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಪೂಜೆ, ಲಲಿತಾ ಸಹಸ್ರನಾಮ ಪಾರಾಯಣ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ಮಾ.೭ ರಂದು ವೈದಿಕ ವಿಧಿ ವಿಧಾನ ಪ್ರಾರಂಭ, ಆಶ್ಲೇಷ ಬಲಿ ಮಹಾಪೂಜೆ, ಮಂಡಲ ಪೂಜೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಡಾ| ಎಲ್ ಹೆಚ್ ಮಂಜುನಾಥ್ ಧರ್ಮಸ್ಥಳ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಮಾ.೮ ರಂದು ವೈದಿಕ ವಿಧಿವಿಧಾನ ಪ್ರಾರಂಭ, ಚಂಡಿಕಾಯಾಗ , ಗಂಟೆ ೧೦.೫೨ ರ ವೃಷಭ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಂಗಪೂಜೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಶಿವಪ್ರಸಾದ್ ಅಜಿಲ, ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಎಂದು ಬ್ರಹ್ಮಕಲಾಶಭಿಕೋತ್ಸವದ ಅಧ್ಯಕ್ಷ ಸುಧೀರ್ ಎಸ್,ಪಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.