ನಾರಾವಿ : ಪ್ರೊಜೆಕ್ಟರ್ ಉದ್ಘಾಟನೆ ಹಾಗೂ ಸಮವಸ್ತ್ರ ವಿತರಣಾ ಕಾರ್‍ಯಕ್ರಮ

ನಾರಾವಿ : ಸ.ಉ.ಪ್ರಾ.ಶಾಲೆ ನಾರಾವಿಯಲ್ಲಿ ಫೆ-26 ರಂದು ಪ್ರೊಜೆಕ್ಟರ್ ಉದ್ಘಾಟನೆ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಅನ್ವರ್ ವಹಿಸಿದ್ದರು. ಪ್ರೊಜೆಕ್ಟರ್ ಅಳವಡಿಕೆಗಾಗಿ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಬಿಡುಗಡೆಗೊಳಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ಕ್ಷೇತ್ರವು ಬೆಳೆದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಬಳಿಕ ಶಾಲಾ ಸಮವಸ್ತ್ರ ವಿತರಣಾ ಕಾರ್‍ಯಕ್ರಮ ನೇರವೇರಿತು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಮಮತಾ ಶಾಲಾ ಅಭಿವೃದ್ಧಿಗೆ ಶ್ರಮವಹಿಸಿ ದುಡಿಯುತ್ತಿರುವ ಶಿಕ್ಷಕ ವರ್ಗದ ಬಗ್ಗೆ ಹಾಗೂ ವಿವಿಧ ದಾನಿಗಳ ಮೂಲಕ ಶಾಲೆಗೆ ಇನ್ವರ್ಟರ್ ಒದಗಿಸುವಲ್ಲಿ ಸಹಕರಿಸಿದ ದೈಹಿಕ ಶಿಕ್ಷಕ ಪ್ರಭಾಕರ ಎನ್ ರವರ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು. ಜಿ.ಪಂ ಸದಸ್ಯ ಧರಣೇಂದ್ರ ಕುಮಾರ್‌ರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಹಾಗೂ ವಿದ್ಯಾರ್ಥಿಗಳ ವಾರ್ಷಿಕ ಕಾರ್‍ಯಚಟುವಟಿಕೆಗಳ ವೀಡಿಯೋ ತೋರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿಯ ಉಪಾಧ್ಯಕ್ಷ ವಸಂತ ಪೂಜಾರಿ, ಶಾಲಾ ಎಸ್.ಡಿ.ಎಂ.ಸಿಯ ಎಲ್ಲಾ ಸದಸ್ಯರು, ಪೋಷಕರು, ಶಿಕ್ಷಕವೃಂದ, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಸ್ಟ್ಯಾನಿ  ಪಿಂಟೋ ಸ್ವಾಗತಿಸಿ, ಶಾರದಾ ನಿರೂಪಿಸಿ, ಮಮತಾ ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.