HomePage_Banner_
HomePage_Banner_
HomePage_Banner_

ಬೆಳ್ತಂಗಡಿ ನಗರದಲ್ಲಿ 22ನೇ ವಾರದ ಸ್ವಚ್ಛತಾ ಅಭಿಯಾನ

Advt_NewsUnder_1

ಬೆಳ್ತಂಗಡಿ: ಪಟ್ಟಣ ಪಂಚಾಯತ್ ಬೆಳ್ತಂಗಡಿಯವರು ಹಮ್ಮಿಕೊಳ್ಳುವ ವಾರದ ಸ್ವಚ್ಛತಾ ಅಭಿಯಾನದ 22ನೇ ವಾರದ ಸ್ವಚ್ಛತೆಯು ಫೆ.27ರಂದು ಗುರುವಾಯನಕೆರೆಯಿಂದ ಬೆಳ್ತಂಗಡಿ ನಗರದ ಸಂತೆಕಟ್ಟೆಯವರೆಗೆ ಎರಡು ತಂಡಗಳಾಗಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.


ಒಂದು ತಂಡವು ಸಂತೆಕಟ್ಟೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭಿಸಿ ವಾಣಿ ಶಾಲೆಯವರೆಗೆ ಮತ್ತೊಂದು ತಂಡ ಗುರುವಾಯನಕೆರೆಯಿಂದ ವಾಣಿ ಶಾಲೆಯವರೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. ಈ ಅಭಿಯಾನದಲ್ಲಿ ಪ್ರತಾಪಸಿಂಹ ನಾಯಕ್, ಜಯರಾಮ ಗೌಡ, ಡಾ.ಪ್ರಮೋದ್ ಆರ್.ನಾಯಕ್, ಮಂಜುನಾಥ ರೈ, ಕಿರಣ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್, ನಗರಪಂಚಾಯತ್‍ನ ಸದಸ್ಯರುಗಳಾದ ಅಂಬರೀಶ್, ಜಯಾನಂದ ಗೌಡ, ರಜನಿ ಕುಡ್ವ, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೋ, ಸೀನಿಯರ್ ಜೆಸಿಐಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬೆಳ್ತಂಗಡಿ ರೋಟರಿ ಕ್ಲಬ್‍ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜೆಸಿಐ ಬೆಳ್ತಂಗಡಿ ಪದಾಧಿಕಾರಿಗಳು, ವಾಣಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.