ಅಮಾಯಕ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳ್ತಂಗಡಿ:  ಅಮಾಯಕ ಯುವಕನ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದಲ್ಲಿ ನಡೆದಿದೆ. ರೆಖ್ಯಾ ಗ್ರಾಮದ ಕೆಳೆಂಜಿನೋಡಿ ನಿವಾಸಿ ಗಿರೀಶ್ ಗೌಡ (25 ವ) ಹಲ್ಲೆಗೊಳಗಾದ ಯುವಕ. ಈ ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಘಟನೆಯ ವಿವರ:
ರೆಖ್ಯಾ ಗ್ರಾಮದ ಕೆಡಂಬಲ ಸಮೀಪದ ಗುಂಡ್ಯ ಹೊಳೆಯಲ್ಲಿ ರೆಖ್ಯಾದ ಯುವಕರ ಗುಂಪೊಂದು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ರೆಖ್ಯಾ ಗ್ರಾಮದ ಕಟ್ಟೆ ನಿವಾಸಿಗಳಾದ ವಿಶ್ವನಾಥ ಕೆ.ಎಸ್  ಮತ್ತು ರಮೇಶ್ ಆಚಾರಿ ಎಂಬವರು ಮದ್ಯ ಸೇವಿಸಿ ಏಕಾಏಕಿ ದಾಂಧಲೆ ಮಾಡಲು ಶುರುಮಾಡಿದ್ದರು. ಇವರನ್ನು ತಡೆಯಲು ಬಂದ ಗಿರೀಶ್ ಗೌಡ ಎಂಬವರ ಮೇಲೆ ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ನೀಡಿರುವುದು ವರದಿಯಾಗಿದೆ. ಗಿರೀಶ್ ಗೆ ಗಂಭೀರ ಗಾಯಗಳಾಗಿದ್ದು, ಬೆಳ್ತಂಗಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ IPC ಸೆಕ್ಷನ್ 341,504,323,324,506,R/W34 IPC ಪ್ರಕರಣ ದಾಖಲಾಗಿದೆ.

ವಿಶ್ವನಾಥ ಕೆ.ಎಸ್ ಮತ್ತು ರಮೇಶ್ ಆಚಾರಿ ಕ್ರಿಮಿನಲ್ ಹಿನ್ನಲೆ ಉಳ್ಳವರಾಗಿದ್ದು, ವಿಶ್ವನಾಥ ಕೆ.ಎಸ್ ವಿರುದ್ಧ ರಾತ್ರಿವೇಳೆ ವಾಹನಗಳಿಂದ ಡೀಸೆಲ್ ಕಳ್ಳತನ, ಯುವತಿಯ ಮಾನಭಂಗಕ್ಕೆ ಯತ್ನ ಕೇಸ್ ನಲ್ಲಿ 2 ಬರಿ ಜೈಲುವಾಸ ಅನುಬಾವಿಸಿದ್ದು ಜಾಮೀನು ಪಡೆದು ಬಿಡುಗಡೆಯಾಗಿದ್ದರು.  ಇವರಿಬ್ಬರ ಮೇಲೆ ಹಿಂದೆಯೇ ಪ್ರಕರಣ ದಾಖಲಾಗಿದ್ದು, ವಿಚಾರಣೆಗಳು ನಡೆಯುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.