ದೆಹಲಿ ಹಿಂಸಾಚಾರದ ವಿರುದ್ಧ ಎಸ್‌ಡಿಪಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಎನ್‌ಆರ್‌ಸಿ ಯಂತಹಾ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ಪ್ಯಾಶಿಸ್ಟ್ ಶಕ್ತಿಗಳು ಮತ್ತು ಪೋಲಿಸರು ದೌರ್ಜನ್ಯ ನಡೆಸಿ ಹತ್ಯಾಕಾಂಡ ನಡೆಸಿದ್ದಾರೆ ಎಂದು ಆರೋಪಿಸಿ ಘಟನೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಬೆಳ್ತಂಗಡಿ ಸಮಿತಿ ವತಿಯಿಂದ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ಧೇಶಿಸಿ ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಇದರ ಅಧ್ಯಕ್ಷ ಮುಸ್ತಫಾ ಜಿ.ಕೆ, ಎಸ್ಡಿಪಿಐ ನಗರ ಸಮಿತಿ ಅಧ್ಯಕ್ಷ ಫೈಝಲ್ ಐ.ಜೆ, ವಿಧಾನ ಸಭಾ ಸಮಿತಿ ಸದಸ್ಯ ಪಝಲ್ ರಹಮಾನ್, ಹನೀಫ್ ಪುಂಜಾಲಕಟ್ಟೆ, ಸಾಲಿ ಮದ್ದಡ್ಕ, ಕಾರ್ಯದರ್ಶಿ ಅಶ್ರಫ್ ಕಟ್ಟೆ, ಎಸ್ಡಿಟಿಯ ಅಧ್ಯಕ್ಷ ಫಾರೂಕು, ಕಾರ್ಯದರ್ಶಿ ಸಮೀಮ್ ಕಟ್ಟೆ, ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿ ಮೊದಲಾದವರು ಭಾಗಿಯಾಗಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.