ಮತಪತ್ರ ಮುದ್ರಣ ದೋಶದಿಂದ ಅನ್ಯಾಯ: ಸಹಕಾರ ಸಂಘಗಳ ಉಪನಿಬಂಧಕರಿಗೆ ಮನವಿ

ಮುಂಡಾಜೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆ ವೇಳೆ ೧೦ ಮಂದಿಯಲ್ಲಿ ೫ ಮಂದಿಯನ್ನು ಆಯ್ಕೆ ಮಾಡಬೇಕಾಗಿದ್ದ ಮತಪತ್ರದಲ್ಲಿ ಪ್ರಥಮ ಸಂಖ್ಯೆಯಲ್ಲಿ ಹೆಸರು ದಾಖಲಾಗಬೇಕಿದ್ದ ಎನ್.ಎಸ್ ಗೋಖಲೆ ಅವರ ಹೆಸರು ಮುದ್ರಣ ದೋಷದಿಂದ ಒಂದು ಹಂತ ಕೆಳಗೆ ಬಂದಿದ್ದ ಕಾರಣದಿಂದ ಮತದಾರರಲ್ಲಿ ಗೊಂದಲ ಉಂಟಾದ ಕಾರಣಕ್ಕೆ ಅಭ್ಯರ್ಥಿಗೆ ಅನ್ಯಾಯವಾಗಿ, ಹಿರಿಯ ಸಹಕಾರಿಗಳಾದ ಅವರು ಅನ್ಯಾಯವಾಗಿ ಸೋಲು ಕಾಣುವಂತಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕಾಗಿ ಆಗ್ರಹಿಸಿ ಸಹಕಾರಿ ಸದಸ್ಯರ ಪರವಾಗಿ ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಅವರು ಸಹಕಾರ ಸಂಘಗಳ ಉಪನಿಬಂಧಕರಿಗೆ ಮನವಿ ನೀಡಿದ್ದಾರೆ.
ಚುನಾವಣೆ ಮಾದರಿ ಪತ್ರದಲ್ಲಿ ಅಭ್ಯರ್ಥಿಗಳಿಗೆ ಕ್ರಮಸಂಖ್ಯೆ ಇದ್ದುದು, ಮತಪತ್ರದಲ್ಲಿ ಇಲ್ಲದೇ ಇದ್ದುದರಿಂದ ಹಲವರಿಗೆ ಗೊಂದಲವಾಗಿದೆ. ಚುನಾವಣಾಕಚೇರಿ ಕಡೆಯಿಂದ ಆಗಿರುವ ಮುದ್ರಣ ದೋಷದಿಂದ ಒಂದನೇ ಅಭ್ಯರ್ಥಿಗೆ ಸಲ್ಲಬೇಕಾದ ಮತಗಳು ಎರಡು ಮತ್ತು ಮೂರನೇ ಅಭ್ಯಥಿಗಳಿಗೆ ಸಲ್ಲಿಕೆಯಾಗಿ ಒಂದನೆಯವರಿಗೆ ಅನ್ಯಾಯವಾಗಿದೆ. ಇದಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಗಿದೆ.  ಸದ್ರಿ ಪರಿಶೀಲನೆಗೆ ಆಗ್ರಹಿಸಿದ ಪತ್ರದ ಪ್ರತಿಯನ್ನು ಸಹಕಾರ ಸಂಘಗಳ ಚುನಾವಣಾಧಿಕಾರಿ ಮತ್ತು ಸಹಕಾರ ಆಯುಕ್ತರಿಗೂ ಸಲ್ಲಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.