ಬೆಳ್ತಂಗಡಿ: ಬೆಳ್ತಂಗಡಿಯಿಂದ-ಬೆಂಗಳೂರಿಗೆ ಹೋಗುವ ಹೊಸ ಕೆ.ಎಸ್.ಆರ್.ಟಿ.ಸಿ ೨ ಸ್ಲೀಪರ್ ಕೋಚ್ ಬಸ್ಸಿಗೆ ಫೆ.೨೫ ರಂದು ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಂ, ನಗರ ಪಂ ಸದಸ್ಯ ಜಯಾನಂದ ಗೌಡ, ಶರತ್ ಕುಮಾರ್ ಶೆಟ್ಟಿ, ಎ.ಪಿ.ಎಮ್.ಸಿ ಸದಸ್ಯ ಈಶ್ವರ ಬೈರ, ಕಿರಣ್ ಶೆಟ್ಟಿ, ಉದ್ಯಮಿ ರಾಘವೇಂದ್ರ ಚೆಕ್ಕಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.