ನ್ಯಾಯತರ್ಪು : ಗಣಹೋಮ, ದೇವರ ಪೂಜೆ, ದೈವಗಳ ನೇಮೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು : ಇಲ್ಲಿಯ ಮುದ್ದುಂಜ ಮನೆಯ ಶ್ರೀಮತಿ ಶೀಲಾ ಹಾಗೂ ಸೇಸಪ್ಪ ಗೌಡ ಮತ್ತು ಮಕ್ಕಳಾದ ಯಾದವ ಗೌಡ, ಶೇಖರ ಗೌಡ, ಗೋಪಾಲ ಗೌಡ ಮತ್ತು ರಂಜನ್ ಗೌಡರ ಪ್ರಯುಕ್ತ ಫೆ.೨೫ ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ರಾತ್ರಿ ದೈವಗಳ ನೇಮೋತ್ಸವ ಜರುಗಿತು.
ದೈವಗಳ ಸಾನ್ನಿಧ್ಯ ಶುದ್ಧಿ ಮತ್ತು ರಾತ್ರಿ ದೈವದ ಭಂಡಾರ ಇಳಿದು, ಮೈಸಂದಾಯ, ರಕ್ತೇಶ್ವರಿ, ಕಲ್ಲುರ್ಟಿ, ಪಂಜುರ್ಲಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್, ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬೆಳ್ತಂಗಡಿ ವಲಯ ನಿರ್ದೇಶಕ ಜಯಕರ ಶೆಟ್ಟಿ, ವಲಯ ಮೇಲ್ವಿಚಾರಕ ರಾಜೇಶ್ ಪಿ, ಹರಿದಾಸ ಭಟ್ ಕುಂಠಿನಿ, ಕಳಿಯ ಪಂಚಾಯತ್ ಸದಸ್ಯರು, ನಾಳ ದೇವಸ್ಥಾನ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು,ಕುಟುಂಬದ ಸದಸ್ಯರು, ಬಂಧುಗಳು, ಹಿತೈಷಿಗಳು ಉಪಸ್ಥಿತರಿದ್ದರು.ವೈಭವದ ನೇಮೋತ್ಸವದೊಂದಿಗೆ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.