ಮೇಲಂತಬೆಟ್ಟು : ಬ್ರಹ್ಮಕಲಶೋತ್ಸವ

ಮೇಲಂತಬೆಟ್ಟು : ಶ್ರೀ ಕೊಡಮಣಿತ್ತಾಯ ದೈವಸ್ಥಾನ ಶ್ರೀ ವನದುರ್ಗಾ ದೇವಸ್ಥಾನ ನಲ್ಕೆತ್ಯಾರು ಶ್ರೀ ಬ್ರಹ್ಮಬೈದರ್ಕಳ ಊರ ಗರೋಡಿ ನವೀಕೃತ ದೇಗುಲದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವು ಫೆ-24 ರಂದು ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ಅಜಿಲರು ನೆರವೇರಿಸಿದರು. ಅಧ್ಯಕ್ಷತೆಯನ್ನು ಉದ್ಯಮಿ ಕೆ. ರಮಾನಂದ ಸಾಲಿಯಾನ್ ವಹಿಸಿದರು.


ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ಗ್ರಾ.ಪಂ ಅದ್ಯಕ್ಷೆ ನಳಿನಿ, ಮಾರಿಪೂಜೆ ಸೇವಾ ಸಮಿತಿ ಅಧ್ಯಕ್ಷ ಸೋಮಪ್ಪ ಪೂಜಾರಿ, ಗ್ರಾ.ಪಂ ಉಪಾಧ್ಯಕ್ಷ ಶಿವರಾಮ ಗೌಡ, ದಂತ ವೈದ್ಯ ಡಾ| ಎಂ.ಎಂ ದಯಾಕರ, ಗ್ರಾ.ಪಂ ಸದಸ್ಯರಾದ ಸತೀಶ್ ಕೆಲ್ಲಕೆರೆ, ರೇಖಾ ರಾಜೇಂದ್ರ ನಾಯ್ಕ, ಜಯಂತಿ ಶಿವಯ್ಯ ಮೂಲ್ಯ, ಮಾಧವ ಗಡೇಕರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ಕುರ್ತೋಡಿ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಪ್ರ.ಕಾರ್ಯದರ್ಶಿ ಭಗೀರಥ ಜಿ.ಗುಂಪೋಳಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.