ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ವತಿಯಿಂದ 2020ನೇ ಸಾಲಿನ ಪ್ರಶಸ್ತಿ ಪ್ರಧಾನ ಸಾಧಕರ ಗೌರವಾರ್ಪಣೆ

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಇದರ 2020 ನೇ ಸಾಲಿನ ಪ್ರಶಸ್ತಿ ಪ್ರಧಾನ ಸಾಧಕರ ಗೌರವಾರ್ಪಣೆ ಸುವರ್ಣ ಆರ್ಕೆಡ್ ಬಳಿಯ ವಿಶೇಷ ವೇದಿಕೆಯಲ್ಲಿ ಫೆ. 22 ರಂದು ನಡೆಯಿತು.

ಭಾರತ ಸರಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಅಕ್ಷರ ಸಂತ ಖ್ಯಾತಿಯ ಹರೇಕಳ ಹಾಜಬ್ಬ, ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಕ್ಕೆ ಭಾಜನರಾಗಿ ರಾಷ್ಟ್ರಪತಿ ಗಳಿಂದ ಪುರಸ್ಕಾರ ಸ್ವೀಕರಿಸಿದ ಬೆಳ್ತಂಗಡಿ ಯ ಬಾಲೆ ಸುನೀತಾ ಪ್ರಭು ಮೂರ್ಜೆ, ತುಳು ರಂಗಭೂಮಿ, ಸಿನಿಮಾ ಕ್ಷೇತದ ನಟ,ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬು ಅವರಿಗೆ 2020ನೇ ಸಾಲಿನ ಸುವರ್ಣ ಸಾಂಸ್ಕೃತಿಕ ಪುರಸ್ಕಾರ ನೀಡಲಾಯಿತು.

ಪ್ರತಿಷ್ಠಾನದ ಅಧ್ಯಕ್ಷರೂ ಆಗಿರುವ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂಪತ್ ಬಿ ಸುವರ್ಣ, ಸುವರ್ಣ ಆರ್ಕೆಡ್ ಮಾಲಕ ವೈ ನಾಣ್ಯಪ್ಪ ಪೂಜಾರಿ ಆಗಮಿತ ಗಣ್ಯರನ್ನು, ಪ್ರಶಸ್ತಿ ಪುರಸ್ಕೃತರನ್ನು ಯೋಗ್ಯವಾಗಿ ಗೌರವಿಸಿದರು.

ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಪ್ರತಾಪಸಿಂಹ ನಾಯಕ್, ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ, ಉಜಿರೆಯ ಹಿರಿಯ ಉದ್ಯಮಿ ಸುಬ್ರಾಯ ಶೆಣೈ, ಮೂರ್ಜೆ ಸುನೀತಾ ಪ್ರಭು ತಂದೆ ತಾಯಂದಿರಾದ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು, ಮಚ್ಚಿನ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಶ್ವರ ಡಾ.‌ಹರ್ಷ ಸಂಪಿಗೆತ್ತಾಯ
ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.