ರುದ್ರಗಿರಿ ಮೃತ್ಯುಂಜಯ ದೇವಸ್ಥಾನ ಬ್ರಹ್ಮ ಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುವಂತ : ಇಲ್ಲಿಯ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಫೆ. 23 ರಂದು ಕ್ಷೇತ್ರದ ವಠಾರದಲ್ಲಿ ನಡೆಯಿತು.
ಮಾ.8 ರಿಂದ ಮಾ.15 ರ ತನಕ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ,ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಪಾರಿ ದೈವಗಳ ಪ್ರತಿಷ್ಠೆ ಮತ್ತು ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.


ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆ ಶ್ರೀ ತಿಮ್ಮಣ್ಣರಸರಾದ ಡಾ||ಪದ್ಮ ಪ್ರಸಾದ ಅಜಿಲರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ,ತಂತ್ರೀವರ್ಯರ ಹಾಗೂ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರಿಗೆ ಪ್ರಥಮ ಆಮಂತ್ರಣ ನೀಡುವ ಮೂಲಕ ಬಿಡುಗಡೆ ಮಾಡಿ ಮಾತನಾಡುತ್ತಾ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಪಾಲುದಾರರಾಗ ಬೇಕು ಎಂದು ಹೇಳಿ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಅಧ್ಯಕ್ಷರಾದ ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ, ಕಾರ್ಯಕ್ರಮದ ವಿವಿಧ ಸಮಿತಿಯ ಸಂಚಾಲಕರು ಮತ್ತು ಪದಾಧಿಕಾರಿಗಳು ಜವಾಬ್ದಾರಿಯನ್ನು ವಹಿಸಿಕೊಂಡು,ಬ್ರಹ್ಮಕಲಶೋತ್ಸವದ ಸಮಯದಲ್ಲಿ ನಡೆಯಲಿರುವ ಪ್ರತಿಯೊಂದು ಕೆಲಸ ಕಾರ್ಯಕ್ರಮವನ್ನು ನಿರ್ವಹಿಸುವ ಮೂಲಕ ಊರಿನ,ಪರ-ಊರಿನಿಂದ ಬರುವ ಸಾವಿರಾರು ಭಕ್ತಾಧಿಗಳು ಆಗಮಿಸುವ ಸಮಯದಲ್ಲಿ ಸಮಿತಿಯ ಪದಾಧಿಕಾರಿಗಳು, ಸಂಚಾಲಕರು, ಸದಸ್ಯರು ತಮ್ಮ ಜವಾಬ್ದಾರಿಯನ್ನು ಯಾವ ರೀತಿಯಲ್ಲಿ ವಹಿಸಿಕೊಳ್ಳು ಬೇಕು ಎಂದು ಮಾರ್ಗದರ್ಶನ ನೀಡುವ ಮೂಲಕ ಗ್ರಾಮಸ್ಥರು ಉತ್ಸಾಹದಿಂದ ಕೆಲಸ ಮಾಡುವಂತೆ ಪ್ರೇರೇಪಿಸಿ,ಹುರಿದುಂಬಿಸದರು.


ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ,ಕಾರ್ಯಾಧ್ಯಕ್ಷ ಮಾಧವ ಜೋಗಿತ್ತಾಯ,ಶಂಕರ್ ಭಟ್, ಪ್ರಧಾನ ಕಾರ್ಯದರ್ಶಿ ದುಗ್ಗಪ್ಪ ಗೌಡ ಪೊಸಂದೋಡಿ,ಚಂದ್ರಹಾಸ ಪಕಳ, ಪೂವಪ್ಪ ಬಂಗೇರ ಅಳಕೆ, ಕೋಶಾಧಿಕಾರಿ ಸುರೇಶ್ ಜಿ. ಕರ್ಪಾಡಿ,ಪ್ರಧಾನ ಅರ್ಚಕ ಅಶೋಕ್ ಭಟ್,ವಜ್ರ ಕುಮಾರ್ ಅಂತರ, ಗೌರವ ಸಲಹೆಗಾರರಾ ಪದ್ಮ ರಾಜ ಅಜಿಲ ಅಂತರ, ರಂಗಪ್ಪ ಪೂಜಾರಿ ಅಳಕೆ,ಭರತ್ ಶೆಟ್ಟಿ ಕೇರಿ,ಪ್ರಭಾಕರ ಗೌಡ ಪೊಸಂದೋಡಿ ಮತ್ತು ವಿವಿಧ ಸಮಿತಿ ಸದಸ್ಯರು,ಪದಾಧಿಕಾರಿಗಳು,ಮಹಿಳೆಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮಡಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅರ್ಥಿಕ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಅಳಕೆ ಧನ್ಯವಾದವಿತ್ತರು.

ಪಾನೀಯಗಳ ವಿಶೇಷತೆ : ಮಾ.8 ರಿಂದ ಮಾ.15 ರ ತನಕ ದಿನ ಒಂದರಂತೆ ಚಿಪ್ಪಡ್ ಜ್ಯೂಸ್, ದ್ರಾಕ್ಷಿ ಜ್ಯೂಸ್ ,ದಾಳಿಂಬೆ ಜ್ಯೂಸ್, ನಿಂಬೆಹಣ್ಣು ಜ್ಯೂಸ್,ಕಬ್ಬು ಜ್ಯೂಸ್,ಎಪ್ಪಲ್ ಜ್ಯೂಸ್, ಕಿತ್ತಳೆ ಜ್ಯೂಸ್, ಪೈನಾಪಲ್ ಜ್ಯೂಸ್, ಪಾನಕ, ಮಜ್ಜಿಗೆ ದಿನಕ್ಕೊಂದು ಬಗೆಯ ಪಾನೀಯಗಳನ್ನು ನೀಡಲು ಭಕ್ತಾಧಿಗಳು ಸ್ವ ಇಚ್ಛೆಯಿಂದ ಒಪ್ಪಿಕೊಂಡರು. ಶಾಸಕ ಹರೀಶ್ ಪೂಂಜ ಮತ್ತು ಶ್ರೀ ತಿಮ್ಮಣ್ಣರಸರಾದ ಡಾ|| ಪದ್ಮ ಪ್ರಸಾದ ಅಜೀಲರು ಇವರಿಗೆ ಸಾಥ್ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.