ಪೆರ್ಮುಡ ಸೂರ್ಯ-ಚಂದ್ರ ಕಂಬಳದಲ್ಲಿ ಹೊಸ ದಾಖಲೆ ಬರೆದ ನಿಶಾಂತ್ ಶೆಟ್ಟಿ!

ವೇಣೂರು: ಐಕಳದಲ್ಲಿ ನಡೆದ ಕಂಬಳದಲ್ಲಿ ಅಶ್ವಥಪುರ ಶ್ರೀನಿವಾಸ ಗೌಡ ಅವರು 142.50 ಮೀ. ಉದ್ದದ ಕರೆಯನ್ನು 13.62 ಸೆಕೆಂಡಿನಲ್ಲಿ ತಲುಪಿ ಅಚ್ಚರಿ ಮೂಡಿಸಿದ್ದರೆ ಕಳೆದ ಫೆ.16 ರಂದು ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಬಜಗೋಳಿ ಜೋಗಿಬೆಟ್ಟು ನಿವಾಸಿ ನಿಶಾಂತ್ ಶೆಟ್ಟಿ ಅವರು ಹೊಸ ದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.

ಹಗ್ಗ ಹಿರಿಯ ವಿಭಾಗದ ಸೆಮಿಫೈನಲ್‌ನಲ್ಲಿ ಹೊಸಬೆಟ್ಟು ಗೋಪಾಲಕೃಷ್ಣ ಭಟ್ ಅವರ ಕೋಣಗಳನ್ನು143 ಮೀ. ಉದ್ದದ ಕರೆಯಲ್ಲಿ13.61 ಸೆಕೆಂಡಿನಲ್ಲಿ ಗುರಿ ತಲುಪಿದ್ದಾರೆ. ಇದನ್ನು 100 ಮೀ.ಗೆ ಹೋಲಿಸಿದರೆ 9.52 ಸೆಕೆಂಡ್ ಆಗಿದೆ. ಗ್ರಾಮೀಣ ಕಂಬಳ ಕ್ರೀಡೆಯಲ್ಲಿ ಒಂದರ ಮೇಲೆ ಒಂದು ದಾಖಲೆ ಸೃಷ್ಠಿಯಾಗುತ್ತಿದ್ದು, ಕಂಬಳಾಭಿಮಾನಿಗಳಲ್ಲಿ ಹೊಸ ಹುರುಪು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.