ಎಸ್.ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆ: ಉಪನ್ಯಾಸ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆ ಉಜಿರೆ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸ.ಉ.ಹಿ.ಪ್ರಾ.ಶಾಲೆ ಕೊಯ್ಯೂರು ಕಸಬ ಮಲೆಬೆಟ್ಟು ಇಲ್ಲಿ ನಡೆಯುತ್ತಿದ್ದು ಸಂಪನ್ಮೂಲ ವ್ಯಕ್ತಿಗಳಾದ ರಾಧಾಕೃಷ್ಣ ತಚ್ಚಮೆ, ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢಶಾಲೆ ಕೊಯ್ಯೂರು ಇವರು ಜೀವ ಜಲದ ಮರುಪೂರಣದ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ವಸಂತಿ, ಸಹಶಿಕ್ಷಕರು, ಸ.ಉ.ಹಿ.ಪ್ರಾ.ಶಾಲೆ ಕೊಯ್ಯೂರು ಕಸಬ ಮಲೆಬೆಟ್ಟು ಇವರು ವಹಿಸಿದ್ದರು. ವೇದಿಕೆಯಲ್ಲಿ ಕೊಯ್ಯೂರು ಕಸಬ ಮಲೆಬೆಟ್ಟು ಶಾಲೆಯ ಮುಖ್ಯೋಪಾಧ್ಯಾಯ ರಂಗಸ್ವಾಮಿ ಸಿ ಆರ್, ಮಲೆಬೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್, ಎಸ್.ಡಿ.ಎಂ.ಸಿ. ಸದಸ್ಯ ಜಯಂತ ಗೌಡ, ಶ್ರೀಮತಿ ಅನಿಶಾ, ಎಸ್.ಕೆ.ಡಿ.ಆರ್.ಡಿ. ಪಿ. ಬೆಳ್ತಂಗಡಿ ವಲಯದ ರಾಜೇಶ್ ಪಿ, ಕೊಯ್ಯೂರು ಕಸಬ ಮಲೆಬೆಟ್ಟು ಶಾಲೆಯ ಅತಿಥಿ ಶಿಕ್ಷಕಿಯಾದ ಕು. ವಿನೋದ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅಶ್ವಿನಿ ಸಂಗಡಿಗರು ಪ್ರಾರ್ಥಿಸಿ, ಸೌಮ್ಯ ಸ್ವಾಗತಿಸಿದರು. ಶ್ರೀಮತಿ ಕೃಷಾಲ ವಂದಿಸಿ, ಸದೀದ್ ಅಹಮದ್ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.