ಫೆ-24 ರಿಂದ 26 ರ ವರೆಗೆ ಮೇಲಂತಬೆಟ್ಟು ದೈವಸ್ಥಾನ, ಶ್ರೀ ವನದುರ್ಗಾ ದೇವಸ್ಥಾನ, ಬ್ರಹ್ಮ ಬೈದರ್ಕಳ ಊರ ಗರಡಿ ಬ್ರಹ್ಮಕಲಶೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೇಲಂತಬೆಟ್ಟು : ಶ್ರೀ ಕೊಡಮಣಿತ್ತಾಯ ದೈವಸ್ಥಾನ ಶ್ರೀ ವನದುರ್ಗಾ ದೇವಸ್ಥಾನ ನಲ್ಕೆತ್ಯಾರು ಶ್ರೀ ಬ್ರಹ್ಮ ಬೈದರ್ಕಳ ಊರ ಗರೋಡಿ ನವೀಕೃತ ದೇಗುಲಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.24 ರಿಂದ 26ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್ ಯೋಗೀಶ್ ಕುಮಾರ್  ಫೆ.22 ರಂದು ದೈವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು.

ಫೆ.24 ರಂದು ಸಾಮೂಹಿಕ ಪ್ರಾರ್ಥನೆ ತೋರಣ ಮೂಹೂರ್ತ ಬೆಳಿಗ್ಗೆ 10 ಗಂಟೆಗೆ ಚರ್ಚ್ ರಸ್ತೆಯಿಂದ ಹೊರಕಾಣಿಕೆ ಮೆರವಣಿಗೆ, ಉಗ್ರಾಣ ಮೂಹೂರ್ತ, ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ.
ಎರಡು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ದೈವಗಳ ನೇಮೋತ್ಸವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಗೀರಥ ಜಿ, ಕೋಶಾಧಿಕಾರಿ ಯೋಗೀಶ್ ನೂಜೇಲು, ಕಾರ್ಯದರ್ಶಿ ಮೋಹನ್ ಕುಮಾರ್ ಬಟ್ಯರಡ್ಡ, ವಿಜಯ ರೈ ಆರ್ಥಿಕ ಸಮಿತಿ ಸಂಚಾಲಕ ಪದ್ಮನಾಭ ಭಂಡಾರಿ, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ರಾಜೇಂದ್ರ ನಾಯ್ಕ್ , ಪ್ರಚಾರ ಸಮಿತಿ ಸಂಚಾಲಕ ಚಂದ್ರರಾಜ್, ಜೀರ್ಣೋದ್ದಾರ ಸಮಿತಿಯ ಹರೀಶ್, ಸೇವಾ ಪ್ರತಿನಿಧಿ ಗುಣವತಿ ವಿವಿಧ ಸಮಿತಿಯ ಸಂಚಾಲಕರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.