ಬೆಳ್ತಂಗಡಿ ಮೂವರು ಕುಖ್ಯಾತ ಕಳ್ಳರ ಬಂಧನ; ಕಾರು, 2 ಬೈಕ್, ಚಿನ್ನಾಭರಣ, ಲೇಪ್‌ಟಾಪ್ ಸಹಿತ ಸೊತ್ತುಗಳ ವಶಕ್ಕೆ

ಬೆಳ್ತಂಗಡಿ: ಒಟ್ಟು 7 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು 3 ಮಂದಿ ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ. ಬಂದಿತರಿಂದ ಒಂದು ಕಾರು, ೨ ಬೈಕ್‌ಗಳು, ಚಿನ್ನಾಭರಣ, ಮೊಬೈಲ್ ಫೋನ್‌ಗಳು, ಲೇಪ್ಟಾಪ್ ಸಹಿತ ನಗರದು ಹೀಗೆ ಒಟ್ಟು ಸೇರಿ 5.50 ಲಕ್ಷ ರೂ.ಗಳ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರು ಮುಂಡಾಜೆ ನಿವಾಸಿ ಸತೀಶ್ ಯಾನೆ ಸ್ಕಾರ್ಪಿಯೋ ಸತೀಶ್(33ವ.), ಪುತ್ತೂರು  ತಾಲೂಕು ಆರ್ಯಾಪು ಗ್ರಾಮದ ಮುಕ್ರುಂಪಾಡಿ ನಿವಾಸಿ ರವಿ ಯಾನೆ ಪುಟ್ಟುರವಿ(29ವ.) ಮತ್ತು ಮಂಗಳೂರು ತಾಲೂಕು ಕುಡುಪು ಗ್ರಾಮದ ಪಾಲ್ದನೆ ಮನೆ ನಿವಾಸಿ ಹರೀಶ್ ಪೂಜಾರಿ (29ವ.) ಎಂಬವರಾಗಿದ್ದಾರೆ. ಇನ್ನೋರ್ವ ಆರೋಪಿ ಮಣಿಕಂಠ ತಲೆಮರೆಸಿಕೊಂಡಿದ್ದಾರೆ.
ಕಳವು ಪ್ರಕರಣಗಳು:
ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಕಾಪಿನಡ್ಕ ಗಾಂಧಿನಗರ, ನಿಡ್ಲೆ ಗ್ರಾಮದ ಬೂಡುಜಾಲು, ಕಕ್ಕಿಂಜೆ ಬಳಿಯ ಚಿಬಿದ್ರೆ ಹೀಗೆ ಒಟ್ಟು ೫ ಮನೆಗಳಿಂದ ಕಳ್ಳತನಗೈದರುವ ಬಗ್ಗೆ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ವಶಪಡಿಸಿಕೊಂಡು ಸೊತ್ತುಗಳು:
ಬಂಧಿತರಿಂದೆರಡು ಕರಿಮಣಿ ಸರಗಳು, ಒಂದು ಹವಳದ ಕನಕ ಮಾಲೆ ಸರ, ಒಂದು ಸರ, ಎರಡು ಜೊತೆ ಜುಮ್ಕಿ ಸಹಿತ ಬೆಂಡೋಲೆಗಳು, ಒಂದು ಜೊತೆ ಜುಮ್ಕಿ, ಏಳು ಉಂಗುರಗಳು ಸೇರಿ ಒಟ್ಟು 115 ಗ್ರಾಂ ಚಿನ್ನದ ಆಭರಣಗಳು, ಇದರ ಅಂದಾಜು ಮೌಲ್ಯ 4.50 ಲಕ್ಷ ರೂ.ಗಳಾಗಿರುತ್ತದೆ. ಎರಡು ಜೊತೆ ಬೆಳ್ಳೀಯ ಕಾಲುಚೈನು, ಒಂದು ಬೆಳ್ಳಿಯ ಚೈನು, ಇವುಗಳ ತೂಕ ಒಟ್ಟು 61 ಗ್ರಾಂ ಗಳಾಗಿದ್ದು ಇದರ ಮೌಲ್ಯ 4 ಸಾವಿರ ರೂ.ಗಳು, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅಂದಾಜು ಮೌಲ್ಯ 21 ಸಾವಿರ ರೂ.ಗಳು, ಅಲ್ಲದೆ ಕೃತ್ಯಕ್ಕೆ ಉಪಯೋಗಿಸಿದ ಹೋಂಡಾ ಕಂಪೆನಿಯ ಟ್ವಿಸ್ಟರ್ ಬೈಕ್, ಸುಝುಕಿ ಕಂಪೆನಿಯ ಅಪ್ಪಾಚಿ ಬೈಕ್, ಮಾರುತಿ 800 ಕಾರು, ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ವಶಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ 5.50 ಲಕ್ಷ ರೂ.ಗಳಾಗಿರುತ್ತದೆ.

ಪ್ರಕರಣದ ಪತ್ತೆಯಲ್ಲಿ ಭಾಗಿಯಾದ ತಂಡ:
ಸದ್ರಿ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ಎಸ್.ಪಿ ಬಿ.ಎಮ್ ಲಕ್ಷ್ಮೀ ಪ್ರಸಾದ್ (ಐಪಿಎಸ್), ಎಡಿಷನಲ್ ಎಸ್.ಪಿ ಡಾ. ವಿಕ್ರಮ್ ಅಮಾಟೆ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ವೆಲೈಂಟೈನ್ ಡಿಸೋಜಾ, ಬೆರಳಚ್ಚು ಮುದ್ರೆ ವಿಭಾಗದ ಉಪಾಧೀಕ್ಷಕ ಎ.ಸಿ ಗೌರೀಶ್ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ಸರ್ಕ್‌ಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಗುಪ್ತವಾರ್ತಾ ವಿಭಾಗದ ಇನ್ಸ್‌ಪೆಕ್ಟರ್ ರವಿ ಬಿ.ಎಸ್, ವೇಣೂರ ಎಸ್.ಐ ಲೋಲಾಕ್ಷ, ಪತ್ತೆ ತಂಡದಲ್ಲಿ ದೇವಪ್ಪ ಎಂ.ಕೆ, ಬೆನ್ನಿಚ್ಚನ್, ರಾಜೇಶ್ ಎನ್., ಹರೀಶ್ ನಾಯ್ಕ, ಪ್ರಮೋದ್ ನಾಯ್ಕ, ಇಬ್ರಾಹಿಂ ಗರ್ಡಾಡಿ, ಪ್ರಶಾಂತ್ ಜೊತೆಗೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯ ವೆಂಕಟೇಶ್ ನಾಯ್ಕ, ಮುಹಮ್ಮದ್ ಆಸಿಫ್ ಮುಂಡಾಜೆ, ಗಣಕಯಂತ್ರ ವಿಭಾಗದ ದಿವಾಕರ ಮತ್ತು ಸಂಪತ್ ಇವರು ಭಾಗವಹಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.