ಮಹಾಶಿವರಾತ್ರಿ ಪ್ರಯುಕ್ತ ಬಳಂಜ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ರಂಗ ಪೂಜೆ

ಬಳಂಜ: ಇತಿಹಾಸ ಪ್ರಸಿದ್ದ ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮದ ಮಹಾಶಿವರಾತ್ರಿ ಫೆ.21 ರಂದು ನಡೆಯಿತು.
ಮಜ್ಜೇನಿಬೈಲು ವಿಶ್ವನಾಥ ಹೊಳ್ಳ, ಅನಂತರಾಮ ಹೊಳ್ಳ ಕುಟುಂಬಸ್ಥರಿಂದ ಶ್ರೀ ದೇವರಿಗೆ ರಂಗಪೂಜೆ, ರುದ್ರಾಭಿಷೇಕ, ಭಜನೆ ಮಹಾಪೂಜೆ ನಡೆಯಿತು. ಊರ-ಪರವೂರ ನೂರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

ದೇವಸ್ಥಾನದಲ್ಲಿ ಮಾರ್ಚ್ 25 ರಿಂದ ನಡೆಯಲಿರುವ ಜಾತ್ರೋತ್ಸವದ ಬಗ್ಗೆ ಸಮಾಲೋಚನೆ ಸಭೆ ಹಾಗೂ ಸಮಿತಿ ರಚನೆಯು ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಬಿ. ಶೀತಲ್ ಪಡಿವಾಳ್‌ರವರ ನೇತೃತ್ವದಲ್ಲಿ ನಡೆಯಿತು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ.ಲಿ ಬೆಂಗಳೂರು ಇದರ ಸ್ಥಾಪಕ ಅಶ್ವಥ್ ಹೆಗ್ಡೆ ಬಳಂಜ ಆಯ್ಕೆಯಾದರು.
ಸಭೆಯಲ್ಲಿ ದೇವಸ್ಥಾನದ ವಸಂತ ಮಂಟಪದ ನಿರ್ಮಾಣದ ಬಗ್ಗೆ ಚರ್ಚೆ ನಡೆಯಿತು. ಜಾತ್ರ ಸಮಿತಿ ಅಧ್ಯಕ್ಷ ಅಶ್ವಥ್ ಹೆಗ್ಡೆ ಈ ಜಾತ್ರೋತ್ಸವದ ಸಮಯದಲ್ಲಿ ವಸಂತ ಮಂಟಪದ ನಿರ್ಮಾಣ ಕಾರ್‍ಯವು ಗ್ರಾಮಸ್ಥರ ಎಲ್ಲರ ಸಹಕಾರದೊಂದಿಗೆ ನಡೆಯಲಿದೆ ಎಂದು ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.