ಫೆ. 24 ರಿಂದ 29: ಪರಪ್ಪು ಮಖಾಂ ಶರೀಫ್ ಉರೂಸ್ ಮುಬಾರಕ್

Advt_NewsUnder_1
Advt_NewsUnder_1

ಬೆಳ್ತಂಗಡಿ: ವಲಿಯುಲ್ಲಾಃಇ ಫಕೀರ್ ಮುಹ್ಯುದ್ದೀನ್ ದರ್ಗಾ ಶರೀಫ್ ಪರಪ್ಪು ಗೇರುಕಟ್ಟೆ ಇಲ್ಲಿ ಅಂತ್ಯವಿಶ್ರಾಂತಿಹೊಂದಿ ಜಾತಿ ಧರ್ಮ ಭೇದವಿಲ್ಲದೆ ಹಲವರ ಕಷ್ಟ ಕಾರ್ಪಣ್ಯಗಳಿಗೆ ತಮ್ಮ ಪವಾಡಗಳಿಂದ ಪರಿಹಾರ ನೀಡುತ್ತಿರುವ ಪರಪ್ಪು ಉಪ್ಪಾಪ ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಕಾರ್ಯಕ್ರಮ ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ಘನ ಅಧ್ಯಕ್ಷತೆಯಲ್ಲಿ ಫೆ. 24 ರಿಂದ ಪ್ರಾರಂಭಗೊಂಡು ಫೆ. 29 ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಬಿ.ಕೆ ರವೂಫ್ ಮತ್ತು ಜಮಾಅತ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬುಲ್ ಕರೀಂ ಗೇರುಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತೀರ್ಥಹಳ್ಳಿ ಅಬೂಬಕ್ಕರ್ ಸಿದ್ದೀಕ್ ತಂಙಳ್ ಉರೂಸ್ ಉದ್ಘಾಟನೆ ನಡೆಸಲಿದ್ದಾರೆ. ಪ್ರತಿದಿನ ರಾತ್ರಿ ಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಫೆ. 24 ರಂದು ರಫೀಕ್ ಸಅದಿ ದೇಲಂಪಾಡಿ, ಫೆ 25 ರಂದು ಅಬ್ದುಲ್ ರಶೀದ್ ಸಅದಿ ಬೋಳಿಯಾರ್, ಫೆ. 26 ರಂದು ಕೆ.ಸಿ ರೋಡ್ ಹುಸೈನ್ ಸಅದಿ, ಫೆ. 27 ರಂದು ರಾಫಿ ಅಹ್ಸನಿ ಕಾಂತಪುರಂ, ಫೆ. 28 ರಂದು ಹಂಝ ಮಿಸ್ಬಾಹಿ ಓಟೆಪದವು ಉಪನ್ಯಾಸ ನಡೆಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪೆಳತ್ತಳಿಕೆ, ಸೈಫುಲ್ಲಾ ಎಚ್.ಎಸ್, ಆಸಿಫ್ ಎಸ್.ಯು ಉಪಸ್ಥಿತರಿದ್ದರು.

ಫೆ. 29 ಉರೂಸ್ ಸಮಾರೋಪ
ಫೆ. 29 ರಂದು ಉರೂಸ್ ಸಮಾರೋಪ ನಡೆಯಲಿದ್ದು, ಸಯ್ಯಿದ್ ಕೂರತ್ ತಂಙಳ್ ನೇತೃತ್ವದಲ್ಲಿ ಸಯ್ಯಿದ್ ಮುಖ್ತಾರ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಅಬ್ದುಲ್ ಲೆತೀಪ್ ಸಖಾಫಿ ಕಾಂತಪುರಂ ನಡೆಸಲಿದ್ದಾರೆ. ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಾಧನೆಗೈದ ಆಂಬುಲೆನ್ಸ್ ಚಾಲಕ ಹನೀಫ್ ಬಳ್ಳಮಂಜ ಅವರಿಗೆ ಸನ್ಮಾನ ನಡೆಯಲಿದೆ. ಸರಕಾರದ ಉಪಕಾರ್ಯದರ್ಶಿ ಕೆ.ಎ ಹಿದಾಯತುಲ್ಲಾ ಸಹಿತ ಪ್ರಮುಖ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.