ಮಕ್ಕಳ ಕನಸು ನನಸು ಮಾಡಿದ “ಕನಸು ಮಾರಾಟಕ್ಕಿದೆ” ಚಿತ್ರ ತಂಡ

Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಎಂಬಲ್ಲಿ ಬೆಟ್ಟದ ಮೇಲೆ ಒಂದು ಸರ್ಕಾರಿ ಶಾಲೆಯಲ್ಲಿ  ಚಿತ್ರೀಕರಣ ನಡೆಸಿದ ಚಿತ್ರತಂಡವು ಶಾಲೆಯ ಇಡೀ ಚಿತ್ರಣವನ್ನೇ ಬದಲಿಸಿದೆ. ಚಿತ್ರೀಕರಣದ ಸಂದರ್ಭ ಶಾಲೆಯನ್ನು ಸ್ವಚ್ಛಂದ ಗೊಳಿಸಿ ಗೋಡೆಯಲ್ಲಿ ವರ್ಣರಂಜಿತ ಚಿತ್ರಬರೆದು. ಮಕ್ಕಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಸಿನಿಮಾದ ಚಿತ್ರೀಕರಣ ಮುಕ್ತಾಯಗೊಳ್ಳುತ್ತಿದ್ದಂತೆ ಶಾಲೆಯ ಚಿತ್ರಣವೇ ಬದಲಾಗಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ತಂಡದ ಜೊತೆ ಸ್ಥಳೀಯ ಶಾಸಕರು, ಊರಿನ ದಾನಿಗಳು, ಸಂಸ್ಥೆಗಳು ಸೇರಿ, ಹೂವಿನ ತೋಟ, ಸಿಸಿ‌ ಕ್ಯಾಮೆರಾ, ಶೌಚಾಲಯ ಮುಂತಾದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಕನ್ನಡ ಶಾಲೆಯ ಉಳಿವಿಗೆ ಸಮಸ್ತರೂ ಈ ರೀತಿಯ ಸೇವೆ ನೀಡಿದರೆ ಆ ಸುಂದರ ವಾತಾವರಣದಲ್ಲಿ ಮುಗ್ಧ ಮಕ್ಕಳು ಸಂತೃಪ್ತಿಯಿಂದ ಕಲಿತು ಕೀರ್ತಿ ತರುತ್ತಾರೆ ಎಂಬುದು ಚಿತ್ರತಂಡದ ಆಶಯ.‌‌

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.