ಕಾಜೂರು ಉರೂಸ್ ಸಮಾರೋಪ: ಸಾವಿರಾರು ಮಂದಿಗೆ ಅನ್ನದಾನ

ಮಿತ್ತಬಾಗಿಲು: ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾ ಶರೀಫ್‌ನಲ್ಲಿ ಫೆ. ೭ ರಿಂದ ಆರಂಭಗೊಂಡ ಉರೂಸ್ ಮುಬಾರಕ್‌ಗೆ ಫೆ. 16 ರಂದು ಸಂಪನ್ನಗೊಂಡಿತು.
ಕಾಜೂರು ಉರೂಸ್ ಸಮಿತಿ ಗೌರವಾಧ್ಯಕ್ಷ, ಸುನ್ನೀ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಉಪಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಿ ಸಂದೇಶ ನೀಡಿದರು. ಸಮಾರೋಪದ ದಿನ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಧಾರ್ಮಿಕ ಪ್ರಭಾಷನ ನೀಡಿದರು.
ಎಸ್‌ವೈಎಸ್ ರಾಜ್ಯ ಪ್ರ. ಕಾರ್ಯದರ್ಶಿ ಡಾ. ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಶುಭ ಕೋರಿದರು. ವೇದಿಕೆಯಲ್ಲಿ ಸಯ್ಯಿದ್ ಶಿಹಾಬುದ್ದೀನ್ ಹೈದ್ರೋಶಿ ತಂಙಳ್ ಕಿಲ್ಲೂರು, ಕೆಎಮ್‌ಜೆಸಿ ರಾಜ್ಯ ಉಪಾಧ್ಯಕ್ಷ ಹಝ್ರತ್ ಡಾ. ಮುಹಮ್ಮದ್ ರಝ್ವಿ ಕಾವಳಕಟ್ಟೆ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಸುಫಿಯಾನ್ ಸಖಾಫಿ, ಇಸ್ಮಾಯಿಲ್ ನ್ಯೂಡೆಲ್ಲಿ, ಉಮರ್ ಸಖಾಫಿ ಕಾಜೂರು, ವಿ.ಎಮ್ ಅಬೂಬಕ್ಕರ್ ಸಖಾಫಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ಕಾಜೂರು, ಉಜಿರೆ ಮುದರ್ರಿಸ್ ಅಬ್ಬಾಸ್ ಮದನಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ನಾವೂರು, ತಾ| ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ, ತಾ| ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಮಾಜಿ ಸೈನಿಕ ಮುಹಮ್ಮದ್ ರಫಿ, ಶಾಫಿ ಸಖಾಫಿ ಪಟ್ಟೂರು, ಕಾಜೂರು ಎಸ್‌ವೈಎಸ್ ಅಧ್ಯಕ್ಷ ಕೆ. ಯು ಮುಹಮ್ಮದ್ ಸಖಾಫಿ, ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಕೆ ಮುಹಮ್ಮದ್ ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದೀಕ್ ಕಾಜೂರು, ಕಾರ್ಯದರ್ಶಿ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಕೆ. ಎಮ್ ಕಮಾಲ್ ಕಾಜೂರು ಹಾಗೂ ಕಾಜೂರು-ಕಿಲ್ಲೂರು ಜಂಟಿ ಜಮಾಅತ್‌ಗಳ ಉರೂಸ್ ಕಮಿಟಿ ಸದಸ್ಯರುಗಳು ಉಪಸ್ಥಿತರಿದ್ದರು.  ಸಯ್ಯಿದ್ ಕಾಜೂರು ತಂಙಳ್ ಮೌಲೀದ್ ಪಾರಾಯಣಗೈದು ಅನ್ನದಾನಕ್ಕೆ ಚಾಲನೆ ಚಾಲನೆ ನೀಡಿದರು.

ವಿಶ್ವಶಾಂತಿಗೆ ಅಲ್ಲಾಹನ ಇಷ್ಟದಾಸರಲ್ಲಿ ಪ್ರಾರ್ಥಿಸಿರಿ: ಸುಲ್ತಾನುಲ್ ಉಲಮಾ ಎಪಿ ಉಸ್ತಾದ್
ಕಾಜೂರು ಉರೂಸ್ ಸಮಾರೋಪದ ಪ್ರಧಾನ ಅತಿಥಿಯಾಗಿದ್ದ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅನಿವಾರ್ಯ ಕಾರಣದಂದ ಕಾರ್ಯಕ್ರಮಕ್ಕೆ ಗೈರಾಗಿದ್ದು, ಉರೂಸ್ ಸಮಾರಂಭವನ್ನುದ್ದೇಶಿಸಿ ಅವರು ಕಳಿಸಿದ ಧ್ವನಿ ಸಂದೇಶದ ಮೂಲಕ ಮಾತನಾಡಿ, ಪ್ರಸಿದ್ದ ಮಖಾಂ ಶರೀಫ್‌ಗಳಲ್ಲಿ ಕಾಜೂರು ಮಖಾಂ ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಅಲ್ಲಾಹನ ಇಷ್ಟದಾಸರಾದ ಔಲಿಯಾಗಳು ಅರಣ್ಯ ಮತ್ತು ನದಿ ತಟವಾದ ಕುಗ್ರಾಮ ಈ ಕಾಜೂರು ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಂದು ಧರ್ಮ ಪ್ರಚಾರ ಮಾಡಿದರು. ಇಸ್ಲಾಂ ಈ ರೀತಿಯ ಶಾಂತಿ ಸೌಹಾರ್ದತೆಯ ಶೈಲಿಯಲ್ಲಿ ಪ್ರಸಾರವಾಗಿತ್ತೇ ವಿನಹ ಬಲಾತ್ಕಾರ, ಯುದ್ಧ, ಭೀತಿಯ ಮಾರ್ಗದಿಂದ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಹಾ ಔಲಿಯಾಗಳ ಚರ್ಯೆ ಪಾಲಿಸಿ  ಸಾಮಾಜಿಕ ಶಾಂತಿಯೊಂದಿಗೆ ನಾವು ಜೀವಿಸುವಂತವರಾಗಬೇಕು ಎಂದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.