ಮರೋಡಿ : ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಗುರು ಜಯಂತಿ, ಧಾರ್ಮಿಕ ಸಭೆ


ಮರೋಡಿ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮರೋಡಿ ಯುವಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಮರೋಡಿ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಗುರು ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಫೆ-16 ರಂದು ಮರೋಡಿ ಪೊಸರಡ್ಕ ದೇವಿಪ್ರಸಾದ್ ಮನೆ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗು.ನಾ.ಸ್ವಾ.ಸೇ.ಸಂಘ ಮರೋಡಿ ಅಧ್ಯಕ್ಷ ನಾರಾಯಣ ಸುವರ್ಣ ಕನರೊಟ್ಟು ವಹಿಸಿದ್ದರು.

ಬೆಳ್ತಂಗಡಿ ಶ್ರೀ.ಗು.ನಾ.ಸ್ವಾ.ಸೇ ಸಂಘದ ಉಪಾದ್ಯಕ್ಷ ಮನೋಹರ್ ಇಳಂತಿಲ, ಮರೋಡಿ ಸಂಘದ ಗೌರವಧ್ಯಕ್ಷ ಜಯಂತ್ ಕೋಟ್ಯಾನ್, ಖ್ಯಾತ ನಿರೂಪಕ, ಮೂಡಬಿದ್ರೆ ರೋಟರಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ನಿತೇಶ್ ಪೂಜಾರಿ, ಖ್ಯಾತ ಮೂತ್ರಪಿಂಡ ತಜ್ಞ ವೆನ್ಲಾಕ್ ಆಸ್ಪತ್ರೆ ಮಂಗಳೂರು ಡಾ| ಸದಾನಂದ ಪೂಜಾರಿ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿ ಯಶೋಧರ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಶಕುಂತಲಾ, ಮ.ಬಿ.ವೇದಿಕೆ ಕಾರ್ಯದರ್ಶಿ ಸುಮಿತ್ರ, ಯು.ಬಿ.ವೇದಿಕೆ ಅಧ್ಯಕ್ಷ ವಿದ್ಯಾನಂದ ಪೂಜಾರಿ, ಯು.ಬಿ.ವೇದಿಕೆ ಕಾರ್ಯದರ್ಶಿ ಅನಿಲ್, ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.