ಬೆಂಗಳೂರು: ಕಾಳಿಕಾಂಬ ದೇವಸ್ಥಾನದಲ್ಲಿ ಪ್ರತಿಷ್ಠಾವರ್ಧಂತಿ ಉತ್ಸವ,ಚಂಡಿಕಾಯಾಗ

ಬೆಳ್ತಂಗಡಿ: ಬೆಂಗಳೂರು ಕಾಳಿಕಾಂಬ ದೇವಸ್ಥಾನದಲ್ಲಿ ಫೆ.15ರಂದು ದ್ವಿತೀಯ ಪ್ರತಿಷ್ಠಾವರ್ಧಂತಿ ಉತ್ಸವ ಮತ್ತು ಲೋಕ ಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಯಾಗ ನಡೆಯಿತು. ಬ್ರಹ್ಮಶ್ರೀ ಕೇಶವ ಪರೋಹಿತ್ ರವರ ಪ್ರಧಾನ ಆಚಾರ್ಯತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಫೆ.14ರಂದು ಸಂಜೆ ದೇವತಾ ಪ್ರಾರ್ಥನೆ, ನಾಗದೇವರಿಗೆ ನವಕಲಶಾಭಿಷೇಕ, ಆಶ್ಲೇಷ ಪೂಜೆ, ರಾಕ್ಷೋಗ್ನ ಹೋಮ, ವಾಸ್ತು ಹೋಮ, ಬಲಿ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ಫೆ.೧೫ರಂದು ಬೆಳಿಗ್ಗೆ 7.30ರಿಂದ ಅಲಂಕಾರ ಪೂಜೆ, ಚಂಡಿಕಾ ಹೋಮ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ಸಭಾ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉದ್ಯಮಿ ವಿವೇಕ್ ನಾಗರಾಜ್ ಅವರು ಇದೇ ಸಂದರ್ಭ ದೇವಿಗೆ ಬೆಳ್ಳಿಯ ಪ್ರಭಾವಳಿಯನ್ನು ಕೊಡುಗೆಯಾಗಿ ನೀಡಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.