ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಮೆಟ್ರಿಕ್ ಮೇಳ

Advt_NewsUnder_1
Advt_NewsUnder_1
Advt_NewsUnder_1

ಪೆರೋಡಿತ್ತಾಯಕಟ್ಟೆ: ಸ.ಉ.ಪ್ರಾ. ಶಾಲೆ ಪೆರೋಡಿತ್ತಾಯಕಟ್ಟೆ, ತೆಂಕಕಾರಂದೂರು, ಇಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಮತ್ತು ಲೆಕ್ಕಾಚಾರ ಸಾಮರ್ಥ್ಯ ವೃದ್ಧಿಗಾಗಿ ಫೆ.೮ ರಂದು ಮೆಟ್ರಿಕ್ ಮೇಳವನ್ನು ಏರ್ಪಡಿಸಲಾಯಿತು.
ಮೆಟ್ರಿಕ್ ಮೇಳವನ್ನು ಊರಿನ ಹಿರಿಯರೂ ಕೊಡುಗೈ ದಾನಿಗಳೂ ಆದ ವಿಠಲ ಹೆಗ್ಡೆಯವರು ಉದ್ಘಾಟಿಸಿದರು. ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ನೇಮು ಸಫಲ್ಯ ಹಾಗೂ ಸಿ.ಆರ್.ಪಿ ಸುಧಾಕರ ಶೆಟ್ಟಿ, ಶಾಲಾ ಎಸ್.ಡಿ.ಎಂ.ಸಿ.ಸದಸ್ಯರು, ಶಾಲಾ ಹಳೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಪದ್ಮಾವತಿ ಎನ್. ವಿಠಲ ಹೆಗ್ಡೆಯವರನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳ ಸ್ಥಳೀಯ ತರಕಾರಿಗಳು, ಮನೆಯಲ್ಲಿ ಸಿದ್ಧಪಡಿಸಿದ ತಿಂಡಿತಿನಸುಗಳು, ಹಣ್ಣು ಹಂಪಲುಗಳುಳ್ಳ ೨೫ ಕ್ಕೂ ಹೆಚ್ಚು ಸ್ಟಾಲ್‌ಗಳು ಇದ್ದವು. ಗ್ರಾಮಸ್ಥರು, ಪೋಷಕರು, ಹಳೆ ವಿದ್ಯಾರ್ಥಿಗಳು ಶಾಲಾ ಮಕ್ಕಳ ಸ್ಟಾಲ್ ಗಳಿಗೆ ಭೇಟಿಕೊಟ್ಟು ವಿವಿಧ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಚರ್ಚಿಸಿದಂತೆ ಚರ್ಚಿಸಿ ವಸ್ತುಗಳನ್ನು ಖರೀದಿಸಿ ಖುಷಿಪಟ್ಟರು. ಶಾಲಾ ಗಣಿತ ಶಿಕ್ಷಕಿ ರವರೊಂದಿಗೆ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಮೆಟ್ರಿಕ್ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.