ಶ್ರೀ ಧ. ಮಂ. ವಸತಿ ಕಾಲೇಜು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಉಜಿರೆ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಮಯ ನಿರ್ವಹಣೆ ಮಾಡಿಕೊಂಡು ಶ್ರದ್ಧೆ, ಆಸಕ್ತಿಗಳಿಂದ ಅಧ್ಯಯನ ಮಾಡಿದರೆ ಯಾವ ವಿಷಯವೂ ಕಠಿಣವೆನಿಸುವುದಿಲ್ಲ. ಎಂದು ಉಜಿರೆಯ ಎಸ್‌ಡಿಎಂ ವಸತಿಯುತ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಕೃಷ್ಣಮೂರ್ತಿ ಹೇಳಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಎರಡು ವರ್ಷದ ಅನುಭವಗಳನ್ನು ಮೆಲಕು ಹಾಕಿದರು.
ವೇದಿಕೆಯಲ್ಲಿ ಕಾಲೇಜಿನ ಹಿಂದಿ ಉಪನ್ಯಾಸಕ ಸುನಿಲ್ ಪಂಡಿತ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್ ಬಾಬು ಎಚ್.ಬಿ, ವಿದ್ಯಾರ್ಥಿ ನಾಯಕರಾದ ಸಮರ್ಥ್ ಎಸ್ ಶೆಟ್ಟಿ ಮತ್ತು ಧನುಷ್ ಗೌಡ ಎ. ಎಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಪ್ರಾಚಾರ್ಯ ಡಾ. ಟಿ. ಕೃಷ್ಣಮೂರ್ತಿ ಮಾಹಿತಿ ಒದಗಿಸಿದರು. ಪ್ರಥಮ ಪಿಯು ವಿದ್ಯಾರ್ಥಿಗಳಾದ ಶ್ರೀನಿವಾಸ್ ಪ್ರಸಾದ್ ಬಿ.ಎಸ್ ನಿರೂಪಿಸಿ, ಸ್ವಾಗತಿಸಿದರು, ಅಭಿನ್ ವಿ.ಎಸ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.