HomePage_Banner_
HomePage_Banner_

ಮುಳಿಯ ಜ್ಯುವೆಲ್ಸ್‌ನ ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್‌ಗೆ ೭೫ ಸಂವತ್ಸರಗಳು ಪೂರೈಸಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವವನ್ನು `ಬಹುಮಾನಗಳ ಸುರಿಮಳೆ’ ಎಂಬ ವಿಶಿಷ್ಟ ಶೈಲಿಯಲ್ಲಿ ನಡೆಸಲಾಗುತ್ತಿದ್ದು ಈ ಕಾರ್ಯಕ್ರಮಗಳಿಗೆ ಫೆ.೫ರಂದು ಪುತ್ತೂರಿನ ಮಳಿಗೆಯಲ್ಲಿ ಚಾಲನೆ ನೀಡಲಾಯಿತು.
ದೀಪ ಬೆಳಗಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್ ಚಾಲನೆ ನೀಡಿದರು.
ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಡಾ| ವಿಜಯ ಕುಮಾರ್ ಮೊಳೆಯಾರ್ ನಡೆಸಿಕೊಟ್ಟರು.
ಬಹುಮಾನ ವಿತರಣೆ: ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಸುನೀತಾ ಅಧಿಕಾರಿ ಪ್ರಾರ್ಥಿಸಿದರು. ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಸ್ವಾಗತಿಸಿದರು. ಮುಳಿಯ ಜ್ಯುವೆಲ್ಸ್‌ನ ಸರಾಫ್ ಮುಳಿಯ ಶ್ಯಾಂ ಭಟ್, ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಶೋ.ರೂಂ ಮ್ಯಾನೇಜರ್ ನಾಮದೇವ ಮಲ್ಯ ವಂದಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.