‘ವಿಜ್ಞಾನ-ತಂತ್ರಜ್ಞಾನ ಸಂಬಂಧಿತ ಕನ್ನಡ ಬರಹಗಳ ಸಂಖ್ಯೆ ಹೆಚ್ಚಲಿ’

ಉಜಿರೆ: ಕನ್ನಡ ಭಾಷೆಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಬರಹಗಳನ್ನು ಬರೆಯುವುದರ ಕಡೆಗೆ ಯುವ ಬರಹಗಾರರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಿ.ಐ.ಎಸ್ ಪ್ರೋಗ್ರಾಮ್ ಮ್ಯಾನೇಜರ್ ಟೀಟೊ ದತ್ತಾ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿಕಿಪೀಡಿಯಾ ಸಂಸ್ಥೆಯೊಂದಿಗೆ ಏರ್ಪಡಿಸಿಕೊಂಡ ಒಡಂಬಡಿಕೆಯ ಆಧಾರದ ಆರಂಭಿಕ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದೊಂದಿಗೆ ವಿಕಿಪೀಡಿಯಾದ ಒಡಂಬಡಿಕೆಯ ಭಾಗವಾಗಿ ವಿದ್ಯಾರ್ಥಿಗಳು ನೀಡಬಹುದಾದ ಬರಹಗಳ ಕೊಡುಗೆಗಳ ಸ್ವರೂಪದ ಕುರಿತು ಸಿ.ಐ.ಎಸ್.ನ ಪ್ರೋಗ್ರಾಮ್ ಆಫೀಸರ್ ಅನಂತ್ ಸುಬ್ರಾಯ ವಿಸ್ತೃತ ಮಾಹಿತಿ ನೀಡಿದರು. ಇವರು ಗೂಗಲ್ ಹೊಸ ಆವಿಷ್ಕಾರ, ಆನ್‌ಲೈನ್ ಲೈಬ್ರರಿ ಮತ್ತು ವಿವಿಧ ವಿಕಿಪೀಡಿಯಾ ಸೈಟ್‌ಗಳ ಬಗ್ಗೆ ವಿವರಿಸಿದರು.
ವಿಕಿಪೀಡಿಯಾದ ಜೊತೆಗಿನ ಒಡಂಬಡಿಕೆಯ ಭಾಗವಾಗಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಮಾಹಿತಿಪೂರ್ಣ ಬರಹಗಳನ್ನು ಬರೆಯಲಿದ್ದಾರೆ ಎಂದು ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ತಿಳಿಸಿದರು. ವಿಭಾಗದ ವಿಕಿಪೀಡಿಯಾ ಪ್ರಭಾರಿ ಸಂಯೋಜಕ ಡಾ.ಹಂಪೇಶ್ ಕೆ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಶಾಂತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.