ಫೆ.16: ರಾತ್ರಿ ಕಾಜೂರು ಉರೂಸ್ ಸಮಾರೋಪ ಸಂಜೆ ಸರ್ವಧರ್ಮೀಯರ ಸೌಹಾರ್ದ ಸಂಗಮ

Advt_NewsUnder_1
Advt_NewsUnder_1
Advt_NewsUnder_1

ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ನಾಡಿನ ಸರ್ವಧರ್ಮೀಯರ ಸೌಹಾರ್ದ ಕೇಂದ್ರ ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಸಂಭ್ರಮದ ಸಮಾರೋಪ ಫೆ. 16 ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ
ಕಾಂತಪುರಂ ಎ.ಪಿ ಅಬೈಬಕ್ಕರ್ ಅವರ ಮುಖ್ಯಪ್ರಭಾಷಣದೊಂದಿಗೆ ನಡೆಯಲಿದೆ.
ಫೆ. 13 ರಂದು ಬಾಯಾರ್ ತಂಙಳ್ ಅಧ್ಯಕ್ಷತೆಯಲ್ಲಿ ಬೃಹತ್ ದ್ಸಿಕ್ರ್ ಮಜ್ಲಿಸ್ ನಡೆಯಲಿದೆ. ಕಾಜೂರು ತಂಙಳ್ ಉದ್ಘಾಟಿಸಲಿದ್ದಾರೆ. ತಾಲೂಕಿನ ಎಲ್ಲ ಸಯ್ಯಿದ್, ಸಾದಾತುಗಳು ಗಣ್ಯ ಉಪಸ್ಥಿತರಿರಲಿದ್ದಾರೆ. ಫೆ. 14 ರಂದು ಮಾಣಿ ಉಸ್ತಾದ್ ನೇತೃತ್ವದಲ್ಲಿ ಕಾಂತಪುರಂ ಅಬ್ದುಲ್ ಲೆತೀಫ್ ಸಖಾಫಿ ಪ್ರಭಾಷಣ, ಫೆ. ೧೫ ರಂದು ಬೇಕಲ್ ಉಸ್ತಾದ್ ನೇತೃತ್ವದಲ್ಲಿ ಪೇರೋಡ್ ಉಸ್ತಾದ್ ಪ್ರಭಾಷಣ ನಡೆಯಲಿದೆ.
ಫೆ.16 ರಂದು ಸರ್ವಧರ್ಮೀಯರ ಸೌಹಾರ್ದ ಸಂಗಮ ನಡೆಯಲಿದ್ದು, ಕಾಜೂರು ಗೌರವಾಧ್ಯಕ್ಷ ಕುಂಬೋಳ್ ತಂಙಳ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಯೇನಪೊಯ ಅಬ್ದುಲ್ಲಕುಂಞಿ, ಎಂ.ಕೆ.ಎಂ ಶಾಫಿ ಸಅದಿ, ಡಾ. ಅಬ್ದುಲ್ ರಶೀದ್ ಝೈನಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ವಕ್ಫ್ ಸಚಿವ ಪ್ರಭು ಚೌಹಾಣ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಉಭಯ ಸದನದ ಶಾಸಕರುಗಳಾದ ಹರೀಶ್ ಪೂಂಜ, ಹರೀಶ್ ಕುಮಾರ್, ಬಿ.ಎಂ ಫಾರೂಕ್, ಝಮೀರ್ ಅಹಮ್ಮದ್, ಯು.ಟಿ ಖಾದರ್, ಐವನ್ ಡಿಸೋಜಾ, ಬಿಬಿಎಂಪಿ ಕಾರ್ಪೋರೇಟರ್ ಮುಜಾಹಿದ್ ಪಾಷಾ ಸೇರಿದಂತೆ ಅನೇಕ ಮಂದಿ ಗಣ್ಯರುಗಳು, ಹಾಲಿ ಮತ್ತು ಮಾಜಿ ಸಚಿವರು ಮತ್ತು ಶಾಸಕರುಗಳು ಭಾಗಿಯಾಗಲಿದ್ದಾರೆ. ರಾತ್ರಿ ಉರೂಸ್ ಸಮಾರೋಪದಲ್ಲಿ ಕಡಲುಂಡಿ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಕಾವಳಕಟ್ಟೆ ಹಝ್ರತ್ ಸಹಿತ ಪಂಡಿತರುಗಳು ಉಪಸ್ಥಿತರಿರಲಿದ್ದಾರೆ ಎಂದು ಉರೂಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.