ಶಿಶಿಲ: ಗಿರಿಯಪ್ಪ ಗೌಡ ನಾಪತ್ತೆ

Advt_NewsUnder_1
Advt_NewsUnder_1
Advt_NewsUnder_1


ಶಿಶಿಲ: ಇಲ್ಲಿಯ ಶಿಶಿಲ ಗ್ರಾಮದ ಗಿರಿಯಪ್ಪ ಗೌಡ (49 ವ) ಎಂಬವರು ಜ.26 ರಂದು ಮನೆಯಲ್ಲಿದ್ದವರು ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಜ.29ರಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಅಂದು ಬೆಳಗ್ಗೆ 10ಕ್ಕೆ ತಾನು ಟೈಲರಿಂಗ್ ಕೆಲಸಕ್ಕೆ ಶಿಶಿಲಕ್ಕೆ ಹೋಗಿದ್ದು, ಸಂಜೆ ಮನೆಗೆ ಬಂದಾಗ ಮನೆಯಲ್ಲಿದ್ದ ಪತಿ ಗಿರಿಯಪ್ಪ ಗೌಡರು ಎಲ್ಲೋ ಹೋಗಿದ್ದು, ಈವರೆಗೂ ಮನೆಗೆ ಬಂದಿರುವುದಿಲ್ಲ. ಸದ್ರಿಯವರು ಸ್ವಲ್ಪ ಮಟ್ಟಿನ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ನೆರೆಕರೆಯವರಲ್ಲಿ, ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಹಿಂದೆಯೂ ಅವರು ಮನೆ ಬಿಟ್ಟು ಹೋಗಿ ಸ್ವಲ್ಪ ದಿನಗಳ ಬಳಿಕ ಮನೆಗೆ ಬಂದಿದ್ದು, ಆದರೆ ಈ ಬಾರಿ ಬಂದಿಲ್ಲ ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ಪೊಲೀಸರು ನಾಪತ್ತೆ ಕೇಸು ದಾಖಲಿಸಿಕೊಂಡಿದ್ದಾರೆ. ಇವರನ್ನು ಕಂಡವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.