ಒಂದೇ ತಿಂಗಳಲ್ಲಿ ಮುಗಿದು ಹೋದ ಬೊಗಸೆ ತುಂಬಾ ಕನಸು ದಾಖಲೆ ನಿರ್ಮಾಣವಾಗಿದೆ.


“ಈ ಕೃತಿಯನ್ನು ಓದುವಾಗ ಕೃತಿಕಾರನೇ ಎದುರು ಕುಳಿತು ಘಟನೆಗಳನ್ನು ಹೇಳಿಕೊಡುವಂತೆ ಭಾಸವಾಗುತ್ತದೆ. ಒಮ್ಮೆ ಕೈಗೆತ್ತಿಕೊಂಡರೆ ಕೆಳಗಿಡಲು ಮನಸ್ಸು ಬರುವುದಿಲ್ಲ ಎಂದು ಅರೆಭಾಷೆ ವಿದ್ವಾಂಸ ಕೆ.ಆರ್. ಗಂಗಾಧರ್ ಮೆಚ್ಚುಗೆ ಸೂಚಿಸುತ್ತಾರೆ. ವಿಮರ್ಶಕ ರಾಮಕೃಷ್ಣ ಭಟ್ ಚೊಕ್ಕಾಡಿ ಇದನ್ನು ಸುಳ್ಯದ ನಾಲ್ಕು ದಶಕಗಳ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಥನ. ಕನ್ನಡದ ಆತ್ಮ ಚರಿತ್ರೆಗಲ್ಲಿ ಅತ್ಯಂತ ಮಹತ್ವದ ಕೃತಿ” ಎಂದು ಕರೆದಿದ್ದಾರೆ.
ಬೊಗಸೆ ತುಂಬಾ ಕನಸು 700  ಪುಟಗಳ ಮೂವತ್ತು ಅಧ್ಯಾಯಗಳಲ್ಲಿ ಶಿಶಿಲರ ನೆನಪು ಮತ್ತು ಸಾಧನೆಗಳನ್ನು ಹೃದ್ಯ ಕನ್ನಡದಲ್ಲಿ ವಿವರಿಸುತ್ತಾ ಹೋಗುತ್ತದೆ. ಎಂಟು ಪುಟಗಳಷ್ಟೇ ಚಿತ್ರಗಳಿಗಾಗಿ ಮೀಸಲಾಗಿದೆ. ಬೆಲೆ ೬೫೦ಇದ್ದರೂ ಕೃತಿಯ ಬೇಡಿಕೆ ಎಷ್ಟು ಹೆಚ್ಚಿದೆಯೆಂದರೆ ಡಿ.ಟಿ.ಪಿ. ಪ್ರತಿಯನ್ನು ಈ ಮೇಲ್‌ನಲ್ಲಿ ಕಳುಹಿಸಿಕೊಡಬೇಕಾದ ಸ್ಥಿತಿ ಉದ್ಭವವಾಗಿದೆ.

“ಎರಡನೇ ಆವೃತ್ತಿ ಹಾಕಿಸಿ ಸರ್ ಎಂದು ಸಲಹೆ ನೀಡಿದರೆ “ಮೊದಲ ಆವೃತ್ತಿಗೆ ಐದು ಲಕ್ಷ ಖರ್ಚಾಯಿತು. ಎರಡನೇ ಆವೃತ್ತಿ ಮಾರಾಟವಾಗದಿದ್ದರೇನು ಗತಿ? ಅಲ್ಲದೆ ಪುಸ್ತಕ ಪ್ರೀತಿ ಇಲ್ಲದ ಸಹೃದಯರು ನನ್ನಿಂದ ದೂರವಾದರೆಂಬ ಭೀತಿಯೂ ಇದೆ” ಎಂದು ಶಿಶಿಲರು ನಗುತ್ತಾರೆ.
“ಈಗೇನು ಬರಿತೀರಿ” ಎಂಬ ಪ್ರಶ್ನೆಗೆ ನಮ್ಮೂರ ಹನ್ನೆರಡು ಅಜ್ಞಾತ ಜನಪದರ ಬಗ್ಗೆ ಬರೆಯುತ್ತಿದ್ದೇನೆ. ಇದು ಗೊರೂರರ ನಮ್ಮೂರ ರಸಿಕರು ಕೃತಿಯ ಹಾಗೆ ಜನರಿಂದ ಆಕರ್ಷೀತವಾಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆ ಎನ್ನುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.