ಉಜಿರೆ: ಎಸ್.ಡಿ.ಎಂ ಕಾಲೇಜಿನ ಸಮ್ಯಕ್ದರ್ಶನ ಸಭಾಭವನದಲ್ಲಿ ಫೆ.3 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಖ್ಯಾತ ಕಲಾವಿದ ಸಿಕ್ಕಿಲ್ ಗುರುಚರಣ್ ಸಂಗೀತ ಕಛೇರಿ ನಡೆಸಿಕೊಟ್ಟರು. ಮನ್ನಕೊಯ್ಲ್ ಜೆ ಬಾಲಾಜಿ ಮೃದಂಗದಲ್ಲಿ, ವಿ. ಸಂಜೀವ್ ವಯೋಲಿನ್ನಲ್ಲಿ ಸಾಥ್ ನೀಡಿದರು.
ಯುವಕರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿ ಬಗ್ಗೆ ಅರಿವು ಮೂಡಿಸುತ್ತಿರುವ ಸ್ಪಿಕ್ ಮೆಕೇ ಸಂಸ್ಥೆಯ ಸಹಯೋಗದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪ್ರಗತಿ ಮತ್ತು ಧನ್ಯ ನಿರೂಪಿಸಿದರು.
-ವರದಿ: ಶ್ವೇತಾ ಮುಂಡ್ರುಪ್ಪಾಡಿ.